ಮೃತ ಬಾಲಕಿ ಸ್ರುಜನ್ಯ ಕುಟುಂಬಕ್ಕೆ 5 ಲಕ್ಷ ಚಕ್ ವಿತರಣೆ
1 min readಚಳ್ಳಕೆರೆ- ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಜೂರು ಗ್ರಾಮದಲ್ಲಿ ಬುಧವಾರ ಮುಂಜಾನೆ ಸುರಿದ ಭಾರಿ ಮಳೆಗೆ ಜಾಜೂರು ಗ್ರಾಮದ ಚಲ್ಮೇಶ್ ಎಂಬುವವರ ಮನೆ ಕುಸಿದು 6 ವರ್ಷ ಬಾಲಕಿ ಸ್ರುಜನ್ಯ ಮೃತಪಟ್ಟ ಅದೇ ಮನೆಯ ಮೂವರು ಗಾಯಗೊಂಡಿದ್ದರು.
ಪ್ರಕೃತಿ ವಿಕೋಪದ ಘಟನೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ 5 ಲಕ್ಷ ಮೌಲ್ಯ ಚೆಕ್ ಕುಟುಂಬ ವರ್ಗಕ್ಕೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಸನ್ಮಾನ್ಯ ಶ್ರೀ ಟಿ ರಘುಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮುಲು ಮಗುವಿನ ಪೋಷಕರಿಗೆ ಸಾಂತ್ವನ ಹೇಳಿದರು.