March 3, 2024

Chitradurga hoysala

Kannada news portal

ರಸ್ತೆ ಅಭಿವೃದ್ಧಿಗೆ 5.76 ಕೋಟಿ: ಶಾಸಕಿ ಪೂರ್ಣಿಮಾ

1 min read

ಹಿರಿಯೂರು: ತಾಲೂಕಿನ ಯರದಕಟ್ಟೆ-ಮೆಟಿಕುರ್ಕೆ- ಸೂರಗೊಂಡನಹಳ್ಳಿ-ತವಂದಿ ಕಾಟನಹಟ್ಟಿ-ಬೀರೇನಹಳ್ಳಿ ರೂ.5.76 ಕೋಟಿ ವೆಚ್ಚದಲ್ಲಿ ಸುಮಾರು 13.5 ಕಿಮೀ ಪಿಎಂಜಿಎಸ್ ವೈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ್ ರವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂ ರೈತರ ಹಿತಕ್ಕಾಗಿ ಮೊದಲ ಆದ್ಯತೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ತಾಲೂಕಿನಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲೋಕೇಶ್, ಮಲಿಕ್ ಸಾಬ್, ಅಂಜನ್ ಮೂರ್ತಿ, ಮಂಜುನಾಥ್, ಯಶೋಧರ, ಸೋಮಣ್ಣ, ಹನುಮಂತರೆಡ್ಡಿ, ನಟೇಶ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *