ಹಂದಿ ವ್ಯವಹಾರದಲ್ಲಿ ನಡೆದಿದ್ದ ತ್ರಿವಳಿ ಕೊಲೆಯ 6 ಆರೋಪಿಗಳ ಸೆರೆಹಿಡಿಯುವಲ್ಲಿ ಜಿಲ್ಲಾ ಪೋಲಿಸ್ ಸಕ್ಸಸ್
1 min readಚಿತ್ರದುರ್ಗ:ತ್ರಿವಳಿ ಕೊಲೆ ಪ್ರಕರಣ ಬೇಧಿಸಿದ ಚಿತ್ರದುರ್ಗ ಜಿಲ್ಲಾ ಪೊಲೀಸರು
ನಾಯಕನಹಟ್ಟಿಯಲ್ಲಿ ನಡೆದಿದ್ದ ಮೂವರ ಹತ್ಯೆ ಪ್ರಕರಣ ಕಳೆದ 2020ರ ಆಗಸ್ಟ್ 17ರಂದು ನಡೆದಿದ್ದ ಹಂದಿ ಸಾಕುವವರ ಕೊಲೆ ಪ್ರಕರಣ.
ತಂದೆ ಸೀನಪ್ಪ(53) ಮಗ ಯಲ್ಲೇಶ್(22) ಸೀನಪ್ಪನ ತಮ್ಮನ ಮಗ ಮಾರೇಶ್(23) ಹತ್ಯೆಯಾಗಿತ್ತು
ಹಂದಿ ಸಾಕಣೆ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಕೊಲೆ
ರಾಣೆಬೆನ್ನೂರು ಮೂಲದ 06ಮಂದಿ ಆರೋಪಿಗಳ ಬಂಧನ
ಸಿದ್ದಪ್ಪ(35) ಮಾರುತಿ(20) ಮಂಜಪ್ಪ(28) ಸುರೇಶ್(22) ಚೌಡಪ್ಪ(35) ಕೃಷ್ಣ(26) ಬಂಧಿತ ಆರೋಪಿಗಳು
ನಾಯಕನಹಟ್ಟಿ ವ್ಯಕ್ತಿಗೆ ಸಹೋದರಿಯರ ಮದುವೆ ಮಾಡಿಕೊಟ್ಟಿದ್ದ ಆರೋಪಿಗಳು
ಸಹೋದರಿಯ ಕುಟುಂಬದವರ ವ್ಯವಹಾರಕ್ಕೆ ಅಡ್ಡಿಯಾಗಿದ್ದ ಮೃತರು
ಹಂದಿಗಳನ್ನು ಕಳ್ಳತನ ಮಾಡಿಕೊಂಡು ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು
ಮಾರಕಾಸ್ತ್ರಗಳಿಂದ ಭೀಕರವಾಗಿ ಮೂವರನ್ನು ಹತ್ಯೆಮಾಡಿದ್ದ ಕೊಲೆಗಡುಕರು
ಚಿತ್ರದುರ್ಗ ಜಿಲ್ಲೆಯ ವಿವಿಧ ಠಾಣೆಯ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ
ಹತ್ಯೆ ಪ್ರಕರಣ ಬೇಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎಸ್ಪಿ ಜಿ.ರಾಧಿಕಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.