May 19, 2024

Chitradurga hoysala

Kannada news portal

ದಾವಣಗೆರೆಯಲ್ಲಿ ಬೈಕ್ ಸಾವರರಿಗೆ ISI ಮಾರ್ಕ್ ಹೊಂದಿರುವ ಹೆಲ್ಮೆಟ್ ಕಡ್ಡಾಯ

1 min read

ದಾವಣಗೆರೆ: ನಗರದಲ್ಲಿ ಇನ್ನುಮುಂದೆ ಕಡ್ಡಾಯವಾಗಿ ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಪಾಲಿಸುವಂತೆ ಸಂಚಾರಿ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ತಾಕೀತು ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ನಗರದಲ್ಲಿ ಐಎಸ್ಐ ಮಾರ್ಕ್ ಇಲ್ಲದ ಪ್ಲಾಸ್ಟಿಕ್ ನಿಂದ ತಯಾರಿಸಿದ ಟೋಪಿಯಂತೆ ಕಾಣುವ ಅರ್ಧ ಹೆಲ್ಮೆಟ್ ಅನ್ನು ಪೋಲೀಸರು ಸಾರ್ವಜನಿಕರಿಂದ ವಶಪಡಿಸಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಜನಸಾಮಾನ್ಯರು ಲಾಕಡೌನನಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಈ ರೀತಿಯ ಪರಿಸ್ಥಿತಿಯಲ್ಲಿ ಬಡವರಿಗೆ ಹೆಚ್ಚಿನ ಬೆಲೆಯ ಐಎಸ್ಐ ಮಾರ್ಕ್ ಹೊಂದಿರುವ ಹೊಸ ಹೆಲ್ಮೆಟ್ ಖರೀದಿಸಲು ಹೊರೆಯಾಗಲಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

About The Author

Leave a Reply

Your email address will not be published. Required fields are marked *