May 19, 2024

Chitradurga hoysala

Kannada news portal

ವೃದ್ಧಾಪ್ಯ ವೇತನ ವೃದ್ಧರ ಮನೆ ಬಾಗಿಲಿಗೆ: ಸಚಿವ ಆರ್.ಅಶೋಕ್

1 min read

ತುಮಕೂರು: ಇನ್ನು ಮುಂದೆ  60 ವರ್ಷ ದಾಟಿದ ವೃದ್ಧರಿಗೆ ಅವರ ಆಧಾರ್ ಕಾರ್ಡ್ ಮಾಹಿತಿ ಆದರಿಸಿ ವೃದ್ಧಾಪ್ಯವೇತನ ಅವರ ಮನೆ ಬಾಗಿಲಿಗೆ ತಲುಪುವಂತೆ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ತುಮಕೂರಿನಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ವೃದ್ಧಾಪ್ಯವೇತನ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ, ಅಂಚೆ ಕಚೇರಿಯಿಂದ ಸರಿಯಾದ ಸಮಯಕ್ಕೆ ಅವರಿಗೆ ಪಿಂಚಣಿ ತಲುಪುತ್ತಿಲ್ಲ, ಜೊತೆಗೆ ಕಮಿಷನ್ ಹಣ ಪಡೆದು ಅವರ ಹಣವನ್ನು ನೀಡುತ್ತಿದ್ದಾರೆ.
 ಮಾತ್ರವಲ್ಲದೆ ಕೆಲವು ಕಡೆ ಪಿಂಚಣಿ ಹಣವನ್ನೇ ಮಂಗಮಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಇನ್ನು ಮುಂದೆ ಅಂಚೆ ಕಚೇರಿಯ ಬದಲಾಗಿ ಎಲ್ಲರ ಖಾತೆಗಳನ್ನು ಆಧಾರ್ ಕಾರ್ಡ್ ಲಿಂಕ್ ಮಾಡಿ ನಕಲಿ ಖಾತೆಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ನಿಜವಾದ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಸೇರುವಂತೆ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
60 ವರ್ಷ ದಾಟಿದ ನಂತರ ಅರ್ಜಿಹಾಕಿ ತಾಲೂಕು ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ಈಗಾಗಲೇ ಉಡುಪಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಮಾಡಿದ್ದು ಸುಮಾರು 10 ಸಾವಿರ ಜನರಿಗೆ ನೀಡಲಾಗಿದೆ. ಇದನ್ನು ತುಮಕೂರಿನಲ್ಲಿ ಕೂಡ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *