ಪ್ರತಿಯೊಂದು ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಶ್ರಮಿಸುತ್ತೇವೆ: ಜಿಪಂ ಸದಸ್ಯ ಓಬಳೇಶ್
1 min readಚಳ್ಳಕೆರೆ-12
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಕುಟುಂಬ ಮತ್ತು ಆರೋಗ್ಯ ಖಾತೆ ಸಚಿವ ಬಿ.ಶ್ರೀರಾಮುಲು ಭದ್ರಾ ಮೇಲ್ದಂಡೆ ಮತ್ತು ತುಂಗಾ ಹಿನ್ನೀರು ಯೋಜನೆಯನ್ನು ತ್ವರಿತ ಗತಿಯಲ್ಲಿ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಓಬಳೇಶ್ ತಿಳಿಸಿದರು.
ಅವರು, ತಾಲ್ಲೂಕಿನ ಘಟಪರ್ತಿ, ದೇವರೆಡ್ಡಿಹಳ್ಳಿ, ಬೇಡರೆಡ್ಡಿಹಳ್ಳಿ, ಹೊನ್ನೂರು, ಗೌರಸಮುದ್ರ ಸೇರಿದಂತೆ ಹಲವಾರು ಪಂಚಾಯಿತಿ ಕೇಂದ್ರದಲ್ಲಿ ಸಾರ್ವಜನಿಕ ಸಭೆ ನಡೆಸಿ ಮಾತನಾಡಿದರು. ಜನರಿಗೆ ಮೂಲಸೌಲಭ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಮತ್ತು ಸಚಿವರು ಸಂಪೂರ್ಣ ಸಿದ್ದರಿದ್ದು, ಜನರು ಅದರ ಸದ್ಭಳಕೆ ಮಾಡಿಕೊಳ್ಳಬೇಕು. ಜನರ ಅವಶ್ಯಕತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದು ಲಾಕ್ ಡೌನ್ ಸಂದರ್ಭದಲ್ಲಿ ಉಚಿತ ಅಕ್ಕಿ, ಖಾತರಿ ಉದ್ಯೋಗ, ಶೌಚಾಲಯ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಮೂಲಭೂತ ಸೌಕರ್ಯಗಳನ್ನು ಸಮಯಕ್ಕೆ ಒದಗಿಸಿದ ಹೆಗ್ಗಳಿಕೆ ನಮ್ಮದು ಎಂದರು.
ಮಂಡಲಾಧ್ಯಕ್ಷ, ತಾಲ್ಲೂಕು ಪಂಚಾಯತಿ ಸದಸ್ಯ ಈ.ರಾಮರೆಡ್ಡಿ ಮಾತನಾಡಿ, ಪ್ರತಿಯೊಂದು ಸಮಸ್ಯೆಯನ್ನು ಆಲಿಸಿ ಅ ಸಮಸ್ಯೆಗೆ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಸಚಿವ ಶ್ರೀರಾಮುಲು ಎಲ್ಲಾ ಮುಖಂಡರನ್ನ ನಿಮ್ಮ ಬಳಿ ಕಳುಹಿಸಿ ನಿಮ್ಮ ಸಮಸ್ಯೆ ಅಸಲಿಸುವಂತೆ ಸೂಚನೆ ನೀಡಿದ್ದಾರೆ. ಗ್ರಾಮ ವ್ಯಾಪ್ತಿಯ ಸಮಸ್ಯೆಗಳನ್ನು ತಿಳಿದು ಸಚಿವರ ಗಮನಕ್ಕೆ ತರಲಾಗುವುದು. ಸಚಿವರು ಅದನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವರು ಎಂದರು.
ಈ ಸಂದರ್ಭದಲ್ಲಿ ಮೋಹನ, ಜಯಪಾಲಯ್ಯ, ಮಲ್ಲೇಶ್,ಪ್ರಕಾಶ್, ರೂಪ,ಸುನಂದಮ್ಮ, ಗೋವಿಂದಪ್ಪ ಮುಂತಾದವರು ಇದ್ದರು.