March 3, 2024

Chitradurga hoysala

Kannada news portal

ಟ್ರಾಕ್ಟರ್ ಹಿಂದೆ ಡಿಕ್ಕಿ ಒಡೆದು ಇಬ್ಬರು ಸ್ಥಳದಲ್ಲಿ ಸಾವು. ಟ್ರಾಕ್ಟರ್ ಹಿಂದೆ ಹೋಗಬೇಕಾದರೆ ಹುಷರ್?

1 min read

ಚಿಂತಾಮಣಿ: ಚಲಿಸುತ್ತಿರುವ ಟ್ರ್ಯಾಕ್ಟರ್’ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೆಂಗಳೂರು ರಸ್ತೆಯ ಹೊಸಹಳ್ಳಿ ಹಾಗೂ ವೈಜ್‌ಕೂರ್ ಬಳಿ ನಡೆದಿದೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಯ್ಚೆರುವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘೋಡಂಪಲ್ಲಿ ನಿವಾಸಿ ಪವನ್(20) ಮತ್ತು ಕಾರ್ತಿಕ್(18) ಮೃತ ಯುವಕರು ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಚಿಂತಾಮಣಿಗೆ ತೆರಳುತ್ತಿದ್ದ ಬೈಕ್ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply

Your email address will not be published. Required fields are marked *