May 19, 2024

Chitradurga hoysala

Kannada news portal

ಹಿಂದೂ ಸಂಸ್ಕೃತಿ ಆಚಾರ ವಿಚಾರ ಎತ್ತಿಹಿಡಿಯುವುದೇ ಹಿಂದೂ ಮಹಾಗಣಪತಿ ಉದ್ದೇಶ: ಅಧ್ಯಕ್ಷ ಬದ್ರಿನಾಥ್

1 min read

ಚಿತ್ರದುರ್ಗ: ಹಿಂದೂಗಳ ಸಂಸ್ಕೃತಿ, ಆಚಾರ, ವಿಚಾರಗಳನ್ನು ಎತ್ತಿಹಿಡಿಯುವುದೇ ಹಿಂದೂ ಮಹಾಗಣಪತಿ ಪ್ರತಿಷ್ಟಾಪನೆ ಉದ್ದೇಶ ಎಂದು ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ಟಿ.ಭದ್ರಿನಾಥ್ ಹೇಳಿದರು.

21 ದಿನಗಳ ಕಾಲ ಸ್ಟೇಡಿಯಂ ರಸ್ತೆಯಲ್ಲಿ ಪ್ರತಿಷ್ಟಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಮೆರವಣಿಗೆ ಹೊರಡುವ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೋನಾ ಹಾವಳಿಯಿರುವುದರಿಂದ ಈ ಬಾರಿ ಶೋಭಾಯಾತ್ರೆಯಿಲ್ಲದೆ ನಾದಸ್ವರದೊಂದಿಗೆ ಸರಳವಾದ ಮೆರವಣಿಯಲ್ಲಿ ಹೊರಟು ಚಂದ್ರವಳ್ಳಿಯಲ್ಲಿ ಹಿಂದೂ ಮಹಾಗಣಪತಿಯನ್ನು ವಿಸರ್ಜಿಸಲು ತೀರ್ಮಾನಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ನಿಯಮಗಳನ್ನು ತಪ್ಪದೆ ಪಾಲಿಸಿದ್ದೇವೆಂದರು.

ಕಳೆದ ಹತ್ತು ವರ್ಷಗಳಿಂದಲೂ ಲಕ್ಷಾಂತರ ಭಕ್ತರು ಸೇರಿ ಹಿಂದೂ ಮಹಾಗಣಪತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಗುತ್ತಿತ್ತು. ಈ ಬಾರಿ ಕೊರೋನಾ ಭೀತಿಯ ನಡುವೆ ಶೋಭಾಯಾತ್ರೆಯನ್ನು ರದ್ದುಪಡಿಸಬೇಕಾಯಿತು. ಎಂದಿನಂತೆ ವಿವಿಧ ಧಾರ್ಮಿಕ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮ ಸಾಂಗ್ಯವಾಗಿ ನೆರವೇರಿತು. ಯೂಟೂಬ್, ಆನ್‍ಲೈನ್, ಫೇಸ್‍ಬುಕ್‍ನಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಿದ್ದಾರೆ.

ನಮ್ಮ ದೇಶದ ಸಂಸ್ಕøತಿ, ಸ್ತ್ರೀಯರ ರಕ್ಷಣೆ, ಗೋವುಗಳನ್ನು ಉಳಿಸುವುದು ನಮ್ಮ ಉದ್ದೇಶವಾಗಿದೆ. ಕೆಲವರು ಹಿಂದೂ ಮಹಾಗಣಪತಿ ಬಿಜೆಪಿ, ವಿಶ್ವಹಿಂದೂ ಪರಿಷತ್, ಭಜರಂಗದಳಕ್ಕಷ್ಟೆ ಸೀಮಿತವಾಗಿದೆ ಎಂದುಕೊಳ್ಳುವುದು ತಪ್ಪು, ಒಟ್ಟಾರೆ ಇದು ಹಿಂದೂಗಳ ಗಣಪತಿ. ಇಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅಪಪ್ರಚಾರ ಮಾಡುವವರಿಗೆ ತಿರುಗೇಟು ನೀಡಿದರು.

ಕೂಡಲಿ ಶೃಂಗೇರಿ ಮಠದ ವಿದ್ಯಾರಣ್ಯ ಸ್ವಾಮೀಜಿ ಮಾತನಾಡಿ ಹಿಂದೂಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಭಾರತದಲ್ಲಿಯೇ ಎರಡನೆ ಸ್ಥಾನದಲ್ಲಿದೆ ಎಂಬುದು ಸಂತೋಷದ ಸಂಗತಿ. ಆದರೆ ಈ ಬಾರಿ ಕೊರೋನಾ ವೈರಸ್ ಇರುವುದರಿಂದ ಹಿಂದೂ ಮಹಾಗಣಪತಿ ಮೆರವಣಿಗೆಯನ್ನು ಸರಳವಾಗಿ ಆಚರಿಸುತ್ತಿರುವುದು ಅನಿವಾರ್ಯವಾಗಿದೆ ಎಂದರು.

ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮಿ, ಭಗೀರಥಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *