ರಾಜಕಾಲುವೆಗಳ ಸರ್ವೆ ಕಾರ್ಯ ಮುಗಿಸಿ ದುರಸ್ಥಿ ಕಾರ್ಯ ಮಾಡಿ: ಶಾಸಕ ಟಿ.ರಘುಮೂರ್ತಿ ಸೂಚನೆ
1 min readಚಳ್ಳಕೆರೆ-13 : ನಗರದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಪ್ರತಿಯೊಂದು ರಾಜಕಾಲುಗಳ ಸರ್ವೆ ನಡೆಸಿ ಅವುಗಳ ದುರಸ್ಥಿ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.
ಕಳೆದ ಹಲವಾರು ವರ್ಷಗಳಿಂದ ರಾಜಕಾಲು ಮುಚ್ಚಿ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿವೆ. ರಾಜಕಾಲುವೆಗಳ ಹೂಳು ತೆಗೆದು ನೀರು ಸಾರಾಗವಾಗಿ ಹೋಗುವಂತೆ ಮಾಡಬೇಕು, ಸಾರ್ವಜನಿಕಗೆ ತೊಂದರೆಯಾಗದಂತೆ ಮಳೆಯ ನೀರು ಎಲ್ಲೂ ಸಂಗ್ರಹವಾಗದ ರೀತಿಯಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ನಗರದ 31 ಮತ್ತು 2ನೇ ವಾರ್ಡಗಳ ಸೂಜಿ ಮಲ್ಲೇಶ್ವರ ನಗರ ಕಾಟಪ್ಪನಹಟ್ಟಿ ಸ್ಥಳಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿ ನೀರು ನಿಂತಹ ಸ್ಥಳಗಳಿಗೆ ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು ತಹಶೀಲ್ದಾರ್ ಮತ್ತು ಸರ್ವೆ ಇಲಾಖೆಯ ಜಂಟಿಯಾಗಿ ರಾಜಕಾಲುವೆ ಸರ್ವೆ ನಡೆಸುವಂತೆ ತಿಳಿಸಿದರು. ಈ ಸಮಯದಲ್ಲಿ ನಗರಸಭೆ ಸದಸ್ಯ ಪ್ರಕಾಶ್, ಮುಖಂಡರಾದ ಅಬ್ದುಲ್ ಖಾದರ್, ನಗರಸಭೆ ಆಯುಕ್ತ ಪಾಲಯ್ಯ ಸಾರ್ವಜನಿಕರ ಹಾಜರಿದ್ದರು.