ಡ್ರಗ್ಸ್ ಮತ್ತು ಕ್ಯಾಸಿನೋಗಳಿಗೆ ಸಂಬಂಧವಿಲ್ಲ : ಹೆಚ್.ಡಿ.ಕುಮಾರಸ್ವಾಮಿ
1 min readಬೆಂಗಳೂರು:ಅಂತರ್ ರಾಷ್ಟ್ರೀಯ ಡ್ರಗ್ಸ್ ಜಾಲದ ನಂಟಿಗೂ ಕ್ಯಾಸಿನೋಗಳಿಗೂ ಯಾವುದೇ ಸಂಬಂಧವಿಲ್ಲ. ಕ್ಯಾಸಿನೋಗಳು ಡ್ರಗ್ಸ್ ಅಡ್ಡೆಗಳಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಅವರು ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿಯೇ ಹಲವು ಫೈವ್ ಸ್ಟಾರ್ ಹೋಟೆಲ್, ಡ್ಯಾನ್ಸ್ ಬಾರ್ ನಡೆಸ್ತಾರಲ್ಲ ಅಲ್ಲಿ ಇಂತಹ ದಂಧೆ ನಡೆಯುತ್ತವೆ ಎಂದು ಕುಟುಕಿದರು.
ಅಂತಹ ನೈಟ್ ಪಾರ್ಟಿಗಳಿಗೆ ಸೆಲೆಬ್ರಿಟಿಗಳನ್ನು ಕರೆದಕೊಂಡು ಹೋದ ನಂತರ ವಾತವರಣ ನಿರ್ಮಾಣವಾಗಿವೆ. ನಾನು ನಿರ್ಮಾಪಕನಾಗಿ ಕ್ಯಾಸಿನೋ ಹೋಗಿದ್ದೇನೆ.
ಈ ಬಗ್ಗೆ ಕೆಟ್ಟ ಭಾವನೆ ಮೂಡಿಸಬೇಡಿ.
ಮೊದಲ ಬಾರಿಗೆ 1982-83ರಲ್ಲಿ ಪತ್ನಿ ಸಮೇತ ಮಲೇಷ್ಯಿಯಾ ಪ್ರವಾಸ ಹೋದಾಗ ಕ್ಯಾಸಿನೋ ನೋಡಿದ್ದೇನೆ. ಅಲ್ಲಿ ಇಂತಹ ದಂಧೆ ನಡೆಯುವುದನ್ನು ನೋಡಿಲ್ಲ ಎಂದು ಹೇಳಿದರು.