ಹೊಸದುರ್ಗದಲ್ಲಿ ಕಲಾವಿದರ ಸಂಘ ಅಸ್ತಿತ್ವಕ್ಕೆ
1 min readಹೊಸದುರ್ಗ : ತಾಲೂಕಿನಲ್ಲಿ ಕಲಾವಿದರ ಸಂಘಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಕಲಾವಿದರು ನಗರದ ಕೋಟೆ ಶ್ರೀರಾಮನ ದೇವಸ್ಥಾನದಲ್ಲಿ ಸಭೆ ಸೇರಿ ಚರ್ಚಿಸಲಾಯಿತು.
ಈ ವೇಳೆ ಅಖಿಲ ಕರ್ನಾಟಕ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಹೊಸದುರ್ಗ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಯಲ್ಲಪ್ಪ, ಪಾರ್ಸಿ ತಿಮ್ಮಪ್ಪ, ಅಧ್ಯಕ್ಷರಾಗಿ ಬಸವರಾಜ್ ಎಚ್.ಎಂ, ಉಪಾಧ್ಯಕ್ಷರಾಗಿ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಎಸ್.ಪಿ. ಜಂಟಿ ಕಾರ್ಯದರ್ಶಿಯಾಗಿ ವಸಂತಕುಮಾರ ಎಚ್.ಎಸ್, ಖಜಾಂಚಿ ಎಸ್.ಕೆ. ಲಿಂಗರಾಜು, ಸಂಘಟನಾ ಕಾರ್ಯದರ್ಶಿಯಾಗಿ ಗುರು, ನಿರ್ದೇಶಕರುಗಳಾಗಿ ದಿನೇಶ್ ಎಂ.ಸಿ, ರಂಗನಾಥ್ ಕೆ, ಸನಾವುಲ್ಲಾ ಸಾಬ್, ವೀರಗಾಸೆ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.