March 29, 2024

Chitradurga hoysala

Kannada news portal

ಕೇರಳದಲ್ಲಿ ಉಪಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕನ್ನಡತಿ ಯಾರು ಗೊತ್ತೆ.

1 min read

ಕರ್ನಾಟಕದವರಾದ ತಮಗೆ ಕೇರಳದ ಬಗ್ಗೆ ಅಭಿಮಾನವಿದೆ. ಅದರಲ್ಲೂ ಗಡಿನಾಡು ಕಾಸರಗೋಡು ಜಿಲ್ಲೆಯ ಬಗ್ಗೆ ಹೆಮ್ಮೆಯಿದೆ. ಅನೇಕ ಮಿತಿಗಳಿದ್ದರೂ, ಇಲ್ಲಿ ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟ ಇತ್ಯಾದಿ ಜನಪರ ಚಟುವಟಿಕೆಗಳು ಪ್ರಶಂಸನೀಯ ಎಂದು ಕನ್ನಡತಿ ಡಿ.ಆರ್.ಮೇಘಶ್ರೀ ಹೇಳಿದ್ದಾರೆ.

ಕಾಸರಗೋಡು: ಕೇರಳದ ಕಾಞಂಗಾಡ್ ಜಿಲ್ಲೆಯ ಉಪ ಜಿಲ್ಲಾಧಿಕಾರಿಯಾಗಿ ಕನ್ನಡತಿ ಡಿ.ಆರ್.ಮೇಘಶ್ರೀ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಕೋಟೆ ನಾಡು ಜಿಲ್ಲೆಯವರಾದ ಮೇಘಶ್ರೀ, ಈ ಹಿಂದೆ ಕೋಝಿಕೋಡ್‌ ಜಿಲ್ಲೆಯಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಕಾಞಂಗಾಡ್‌ ಜಿಲ್ಲೆಯ ಉಪಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ತಮ್ಮ ಮನದಾಳದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

‘ಎಳವೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲೇ ಶಾಲೆಗೆ ತೆರಳುತ್ತಿದ್ದೆ. ಈ ಅವಧಿಯಲ್ಲಿ ಅನೇಕ ಬೇಡಿಕೆಗಳೊಂದಿಗೆ ಮನವಿ ಹಿಡಿದುಕೊಂಡು ಜನಸಾಮಾನ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಕಾಯುತ್ತಿದ್ದರು. ಈ ಅವಧಿಯಲ್ಲಿ ಸಾಮಾನ್ಯ ಜನರ ಬದುಕಿಗೆ ದೈನಂದಿನ ಅಗತ್ಯದ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಧಿಕಾರಿಯಂತಹ ಒಬ್ಬ ಸರಕಾರಿ ಅಧಿಕಾರಿಯಾಗುವುದು ಸೂಕ್ತ ಎಂದು ಮನವರಿಕೆಯಾಗಿತ್ತು. ಈ ಅರಿವಿನ ಬೆಳಕಿನಲ್ಲಿ ಸಿವಿಲ್‌ ಸರ್ವೀಸ್ ರಂಗಕ್ಕಿಳಿದಿದ್ದೆ ಎಂದರು.

ಕರ್ನಾಟಕದವರಾದ ತಮಗೆ ಕೇರಳದ ಬಗ್ಗೆ ಅಭಿಮಾನವಿದೆ. ಅದರಲ್ಲೂ ಗಡಿನಾಡು ಕಾಸರಗೋಡು ಜಿಲ್ಲೆಯ ಬಗ್ಗೆ ಹೆಮ್ಮೆಯಿದೆ. ಅನೇಕ ಮಿತಿಗಳಿದ್ದರೂ, ಇಲ್ಲಿ ಕೊರೊನಾ ವಿರುದ್ಧ ನಡೆಯುತ್ತಿರುವ ಹೋರಾಟ ಇತ್ಯಾದಿ ಜನಪರ ಚಟುವಟಿಕೆಗಳು ಪ್ರಶಂಸನೀಯ. ಸಮರ್ಪಕ ಆಡಳಿತ ವ್ಯವಸ್ಥೆ, ಹೊಣೆಗಾರಿಕೆಯುಳ್ಳ ಜನ ಇಲ್ಲಿನ ಯಶಸ್ಸಿಗೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಅಪಾರ ಸಾಧ್ಯತೆಯಿದೆ. ಅದನ್ನು ಸಮರ್ಪಕವಾಗಿ, ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಕೋವಿಡ್‌ ಭೀತಿ ಪೂರ್ಣರೂಪದಲ್ಲಿ ತೊಲಗಿದ ನಂತರ ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬಹುದಾಗಿದೆ ಎಂದು ಮೇಘಶ್ರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *