ಹೊಸದುರ್ಗ ಅಭಿಮಾನಿ ಬಳಗದಿಂದ ಸಾಸಲು ಸತೀಶ್ ರವರ ಹುಟ್ಟು ಹಬ್ಬ ಆಚರಣೆ
1 min read
ಹೊಸದುರ್ಗ : ಕಾಂಗ್ರೇಸ್ ಪಕ್ಷದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮುಖಂಡರಾದ ಸಾಸಲು ಸತೀಶ್ ಅವರ ಹುಟ್ಟುಹಬ್ಬವನ್ನು ತಾಲ್ಲೂಕಿನ ದಶರಥ ರಾಮೇಶ್ವರ ದೇವಸ್ಥಾನದಲ್ಲಿ ಹೊಸದುರ್ಗ ಅಭಿಮಾನಿ ಬಳಗದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು.
ಈ ವೇಳೆ ಕಾಡು ಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಚಿತ್ತಪ್ಪ ಮಾತನಾಡಿ ದೇಶಾದ್ಯಂತ ಲಾಕ್ ಡೌನ್ ಸಂಕಷ್ಟದಿಂದಾಗಿ ಶ್ರೀಮಂತರಷ್ಟೇ ಅಲ್ಲದೇ, ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಸಂದರ್ಭದಲ್ಲಿ ಅಲೆಮಾರಿ ಜನಾಂಗವಾದಂತ ಕಾಡುಗೊಲ್ಲರೂ ರಾಜ್ಯದ ವಿವಿಧೆಡೆಗೆ ಕುರಿಪಾಲನೆಗಾಗಿ ವಲಸೆಗೆ ತೆರಳಿ, ಸಂಕಷ್ಟಕ್ಕೂ ಸಿಲುಕಿದ್ದರು. ಇವರ ಮೇಲೆ ಅನೇಕ ಕಡೆಯಲ್ಲಿ ದಾಳಿಗಳು, ದೌರ್ಜನ್ಯ, ಹೊಡೆತ-ಬಡಿತಗಳನ್ನು ಅನುಭವಿಸಿದಾಗ ಇಂತಹ ಸಂದರ್ಭದಲ್ಲಿ ಕುರಿಗಾಯಿಗಳಿಗೆ ಕಾವಲಾಗಿ, ಎಷ್ಟೇ ಹೊತ್ತಿನಲ್ಲಿ ಯಾವುದೇ ಕುರಿಗಾಯಿಗಳು ರಾಜ್ಯದ ಎಲ್ಲಿಂದಲೇ ಸಮಸ್ಯೆ ಅಂತ ಕರೆಮಾಡಿದ ತಕ್ಷಣ ಪ್ರತಿಸ್ಪಂದಿಸಿ ಕುರಿಗಾಯಿಗಳಿಗೆ ಕಾವಲುಗಾರರಾಗಿ ಕಾರ್ಯ ನಿರ್ವಹಿಸಿದ ಸಾಸಲು ಸತೀಶ್ ಅವರು, ಜನನಾಯಕೆನಿಸಿಕೊಂಡಿದ್ದಾರೆ. ಅವರು ನೂರಾರು ವರ್ಷ ಸಂತೋಷವಾಗಿ ಇರಬೇಕು ಎಂದು ಶುಭ ಹಾರೈಸಿದರು.
ಯುವ ಕಾಂಗ್ರೆಸ್ ಮುಖಂಡರಾದ ತಿಮ್ಮಯ್ಯ ಮಾತನಾಡಿ ಡಾ.ಸಾಸಲು ಸತೀಶ್ ಅವರು ಯಾವುದೇ ದೊಡ್ಡ ಹುದ್ದೆಯಲಿರುವವರಲ್ಲ. ಇತ್ತ ಅಧಿಕಾರವಿರುವ ರಾಜಕಾರಣಿಯೂ ಅಲ್ಲ. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ನಾಣ್ನುಡಿಯಂತೆ ಹಿಂದುಳಿದ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿ ಕಷ್ಟಗಳನಡುವೆ ಬೆಳೆದು ವಿದ್ಯಾವಂತನಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹಲವು ಮರರ್ಷಗಳಿಂದ ಚಳುವಳಿ, ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದವರು ಸತೀಶ್ ಅವರು. ತಮ್ಮ ಹಿತಕ್ಕಾಗಿ ಜನರನ್ನು ಮರುಳು ಮಾಡುವ, ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರಿಗೆ ಮುಖತೋರಿಸುವ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಸತೀಶ್ ಇನ್ನು ನೇರ ರಾಜಕೀಯ ಅಧಿಕಾರ ಸಿಕ್ಕರೆ ನಿಜಕ್ಕೂ ನೊಂದವರ ಪರವಾಗಿ ಜನಪರ ಆಡಳಿತಗಾರರಾಗುವಲ್ಲಿ ಹುಸಿಯಾಗಲಾರದು ಎಂದು ಅಭಿಪ್ರಾಯ ಪಟ್ಟರು.
ಒಟ್ಟಾರೆ ಮುಂದೆ ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಯಾದವ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಯಾದವ ಸಮುದಾಯದ ಮುಖಂಡ ಡಾ| ಸಾಸಲು ಸತೀಶ್ ಅವರಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ಕಳೆದೆರೆಡು ವಿಧಾನಸಭಾ ಚುನಾವಣೆಗಳಲ್ಲಿ ಯಾದವ ಸಮುದಾಯಕ್ಕೆ ಟಿಕೆಟ್ ನೀಡದೆ ಕಾಂಗ್ರೆಸ್ ದ್ರೋಹ ಎಸಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮುಖಂಡ ಸತೀಶ್ ಅವರಿಗೆ ಟಿಕೆಟ್ ನೀಡಬೇಕೆಂದು ಮುಖಂಡರು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ವೆಂಕಟೇಶ್, ಕೋದಂಡರಾಮ, ರಮೇಶ್, ಪೂಜಾರ್ ತಿಮ್ಮಯ್ಯ, ಶ್ರೀನಾಥ್, ಜೆ.ರಮೇಶ್ ಹಾಗೂ ಯುವ ಮುಖಂಡರು
ಭಾಗವಹಿಸಿದ್ದರು.