ಜೀ ಕನ್ನಡ ವಾಹಿನಿ ವತಿಯಿಂದ ಕೋವಿಡ್ ನಿರ್ವಹಣೆಗೆ 20 ಅಂಬುಲೆನ್ಸ್ .
1 min readಬೆಂಗಳೂರು: ಜೀ ಕನ್ನಡ ವಾಹಿನಿ ವತಿಯಿಂದ ಇಂದು ಕೋವಿಡ್ ನಿರ್ವಹಣೆಗಾಗಿ 20 ಆಂಬುಲೆನ್ಸ್, 25 ಎಚ್.ಎಫ್.ಎನ್.ಸಿ ಯಂತ್ರಗಳು ಮತ್ತು 4,000 ಪಿಪಿಇ ಕಿಟ್ ಗಳನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಜ಼ೀ ವಾಹಿನಿಯ ಪ್ರತಿನಿಧಿಯಿಂದ ಮಾನ್ಯ ಮುಖ್ಯಮಂತ್ರಿ ಶ್ರೀಬಿ.ಎಸ್.ಯಡಿಯೂರಪ್ಪನವರು ಈ ಉಪಕರಣಗಳನ್ನು ಸ್ವೀಕರಿಸಿದರು. ಮಾನ್ಯ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಸಚಿವರುಗಳಾದ ಶ್ರೀ ಆರ್.ಅಶೋಕ್, ಸುಧಾಕರ್ , ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.