March 3, 2024

Chitradurga hoysala

Kannada news portal

ನಾಯಕ‌ ಜನಾಂಗದ ಶ್ರೀರಾಮುಲುಗೆ  ಡಿಸಿಎಂ‌ ನೀಡಿ ಮತಬ್ಯಾಂಕ್ ಭದ್ರಗೊಳಿಸಿಕೊಳ್ಳುತ್ತ ಬಿಜೆಪಿ?   

1 min read

 

ವಿಶೇಷ ವರದಿ:ಪಿ.ಕೆ.ಅಜಯ್ ಇಂಗಳದಾಳ್

ಚಿತ್ರದುರ್ಗ: ಕರ್ನಾಟಕದ ಬಿಜೆಪಿ ಮಟ್ಟಿಗೆ ಹಿಂದುಳಿರ ವರ್ಗದ ನಾಯಕ ಎಂದು ಗುರುತಿಸಿಕೊಂಡು ರಾಜ್ಯಾದ್ಯಂತ ತನ್ನದೇ ಅಪಾರ ಅಭಿಮಾನ ಜೊತೆಗೆ ರಾಜ್ಯದ ಜನಾಂಗಗಳಲ್ಲಿ   4 ನೇ ಅತಿ ದೊಡ್ಡ ಸಮಾಜವಾದ ನಾಯಕ ಜನಾಂಗದ ಮತಗಳನ್ನು ಹಿಡಿಯಾಗಿ ತಂದು ಬಿಜೆಪಿ ಪಾಲಿಗೆ ಹಾಕಬಲ್ಲ ಏಕೈಕ ನಾಯಕ    ಆರೋಗ್ಯ ಸಚಿವ  ಶ್ರೀರಾಮುಲು ಎಂದು ಹೇಳಬಹುದು. 

ಕಳೆದ ವಿಧಾನಸಭೆ ಚುನಾವಣೆ ಪ್ರಾರಂಭದಿಂದ ಸಹ ರಾಮುಲು ಡಿಸಿಎಂ ಆಗುತ್ತಾರೆ ಎಂಬ ಮಾತು ರಾಜ್ಯದಲ್ಲಿ  ಕೇಳಿ ಬಂದಿತ್ತು.ಆದರೆ ಬಿಜೆಪಿ  ಸರ್ಕಾರ ಬರಲಿಲ್ಲ. ನಂತರ 1 ವರೆ ವರ್ಷಗಳ ನಂತರ ಸರ್ಕಾರ ಬಂದು ರಾಮುಲು ಡಿಸಿಎಂ ಆಗಿ ಬಿಟ್ಟು ಎಂದು ಅಭಿಮಾನಿಗಳು ಮತ್ತು ನಾಯಕ ಜನಾಂಗ ಅಂತಹ ಜಾತಕ ಪಕ್ಷಿಯಂತೆ ಕಾದು ಕುಳಿತಿತ್ತು ಆದರೆ ನಡೆದದ್ದು ಬೇರೆ ಸೋತವರಿಗೆ ಡಿಸಿಎಂ ಮಾಡಿ ನಾಯಕ ಜನಾಂಗ ಜೊತೆಗೆ ರಾಮುಲು ಅವರಿಗೆ ಬೇಸರ ಜೊತೆಗೆ ನಾಯಕ ಜನಾಂಗ ಕೊತಕೊತನೆ ಕುದಿಯುತ್ತಿದೆ.  ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಜೊತೆಗೆ ರಾಮುಲುಗೆ ಡಿಸಿಎಂ  ಅಥವಾ ಸಮಾಜಕಲ್ಯಾಣ ಇಲಾಖೆ ನೀಡಿ ನಾಯಕ ಜನಾಂದ ಮತಬ್ಯಾಂಕ್ ಭದ್ರ ಮಾಡಿಕೊಂಡು ಮುಂದೆ ಎದುರಾಗುತ್ತಿರುವ ಸ್ಥಳೀಯ ಗ್ರಾಮ ಪಂಚಾಯತಿ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕಮಲದ ಬಾವುಟ ಹಾರಿಸಲು ಭದ್ರ ಮಾಡಿಕೊಳ್ಳತ್ತಾರೆ ಎಂಬುದು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ.  ಶ್ರೀರಾಮುಲು ಡಿಸಿಎಂ ಅಥವಾ ಸಮಾಜ ಕಲ್ಯಾಣ ಇಲಾಖೆ ನೀಡಿ ನಾಯಕ ಜನಾಂಗವನ್ನು ತಣ್ಣಗಾಗಿಸುತ್ತಾರಾ ಅಥವಾ ನಾಯಕ ಜನಾಂಗ ಮತ ಬ್ಯಾಂಕ್ ಕಳೆದುಕೊಳ್ಳತ್ತಾರ ಎಂದು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *