ಚಿತ್ರದುರ್ಗ ಜಿಲ್ಲೆ ಪ್ರವಾಹ ಪೀಡಿತ ಮತ್ತು ಅತಿವೃಷ್ಟಿ ಎಂದು ಘೋಷಣೆ ಮಾಡಲು ಸಿಎಂ ಜೊತೆ ಚರ್ಚೆ: ಸಚಿವ ಶ್ರೀರಾಮುಲು ಟ್ವಿಟ್
1 min readಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಮತ್ತು ಇತರೆ ಬೆಳೆಗಳು ಮಳೆಯಿಂದ ನಾಶವಾಗಿ ರೈತರಿಗೆ ತುಂಬಲಾದದ ನಷ್ಚವಾಗಿದೆ.ಈವರೆಗೂ ಸುಮಾರು 7.302 ಹೆಕ್ಟೇರ್ ಪ್ರದೇಶದಲ್ಲಿ 9 ಕೋಟಿ 87 ಲಕ್ಷ ರೂಪಾಯಿಗಳ ಮೊತ್ತದಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.
ಜನ ಜಾನುವಾರು ಮತ್ತು ಮೂಲಸೌಕರ್ಯ ಸೇರಿದಂತೆ ಅಂದಾಜು 91 ಕೋಟಿ 87 ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿದಿದ್ದು ನಷ್ಟ ಹೊಂದಿರುವ ಯಾವುದೇ ರೈತನೂ ಬೆಳೆ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುವುದು.ನಮ್ಮ ಸರ್ಕಾರ ರೈತರ ಜೊತೆಗಿದೆ ಯಾರು ಸಹ ದೃತಿಗೆಡಬೇಕಿಲ್ಲ .
ಚಿತ್ರದುರ್ಗ ಜಿಲ್ಲೆಯನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಜಿಲ್ಲೆ ಎಂದು ಷೋಷಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ನಾನು ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಚರ್ಚೆ ಮಾಡುತ್ತೇವೆ ಎಂದು ಟ್ವಿಟ್ ಮಾಡಿದ್ದಾರೆ.