ಎಲ್ಲಾ ರೈತರಿಗೆ ಅಚ್ಚುಕಟ್ಟಾಗಿ ಬೆಳೆ ಸಮೀಕ್ಷೆ ಮಾಡಿ ವರದಿ ಸಲ್ಲಿಸಿ: ಸೌಭಾಗ್ಯ ಬಸವರಾಜನ್
1 min readಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯರಾದ ಸೌಭಾಗ್ಯಬಸವರಾಜನ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜೆಎನ್. ಕೋಟೆ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕೋವಿಡ್ ಬಂದಾಗಿನಿಂದ ಇಲ್ಲಿಯ ತನಕದ ಒಂಬತ್ತು ಗ್ರಾಮಗಳ ಅಭಿವೃದ್ಧಿ ಬಗ್ಗೆ ಮತ್ತು ಮುಖ್ಯವಾಗಿ ಪ್ರಸ್ತುತ ಅತೀವೃಷ್ಟಿಯಿಂದ ಸಂಪೂರ್ಣ ನಾಶವಾದ ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಹಾಗು ಇತರೆ ಬೆಳೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಸಹಾಯಧನ ನೀಡಲು ಸರ್ಕಾರಕ್ಕೆ ಮಾಹಿತಿ ಸಲ್ಲಿಸಲು ಸೂಚಿಸಿದರು.
ಜಿಲ್ಲೆಯಾದ್ಯಂತ ಅತಿ ಹೆಚ್ಚಿನ ಮಳೆ ಬಂದಿದ್ದು ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಫಸಲು ಸೇರಿದಂತೆ ಬಹುತೇಕ ಎಲ್ಲ ಬೆಳೆಗಳಿಗೆ ಕೊಳೆ ರೋಗ, ಬೆಂಕಿ ರೋಗ, ವಿವಿಧ ಕೀಟಗಳ ಹಾವಳಿಯಿಂದಾಗಿ ರೈತರು ಸಂಪೂರ್ಣ ಬೆಳೆಗಳನ್ನು ಕಳೆದುಕೊಂಡಿದ್ದು ಕೃಷಿ, ತೋಟಗಾರಿಕೆ ಅಧಿಕಾರಿಗಳು ಬೆಳೆ ಹಾನಿಯ ನೈಜ ವರದಿ ನೀಡಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಸೂಚಿಸಿದರು.
ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.