ಪವರ್ ಟಿವಿ ಸುದ್ದಿ ವಾಹಿನಿ ಸ್ಥಗಿತಗೊಳಿಸಿರುವುದನ್ನು ಕೂಡಲೇ ತೆರವುಗೊಳಿಸಿ ಸರ್ಕಾರಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಮನವಿ.
1 min readಚಿತ್ರದುರ್ಗ: ಪವರ್ ಟಿವಿ ಸುದ್ದಿವಾಹಿನಿ ಪ್ರಸಾರ ಬಂದ್ ಮಾಡಿರುವ ಕ್ರಮ ಖಂಡಿಸಿ ಹಾಗೂ ವಾಹಿನಿ ಪ್ರಸಾರ ಸ್ಥಗಿತಗೊಳಿಸಿರು ವುದನ್ನು ಕೂಡಲೇ ತೆರವು ಗೊಳಿಸಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರ ಮೂಲಕ ಬುಧವಾರ ರಾಷ್ಟ್ರಪತಿಗಳು ಹಾಗೂ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾದ ಡಿ.ಕುಮಾರ್ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ದಿನೇಶ್ ಗೌಡಗೆರೆ
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಕೀಕೆರೆ ತಿಪ್ಪೇಸ್ವಾಮಿ,ಎಸ್. ಸಿದ್ದರಾಜು ಸಿ.ಪಿ.ಮಾರುತಿ ರಾಷ್ಟ್ರೀಯ ಮಂಡಳಿ ಸದಸ್ಯ ರಾದ ಮಾಲತೇಶ್ ಅರಸ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು , ಹೊಸದಿಗಂತ ವರಿದಿಗಾರ ತಿಪ್ಪೇಸ್ವಾಮಿ ಎನ್
ಡಿ.ಟಿವಿ ವರದಿಗಾರ ಚನ್ನಬಸವಯ್ಯ, ಪವರ್ ಟಿವಿ ವರದಿಗಾರರಾದ ಸುನೀಲ್ ರೆಡ್ಡಿ ಕಸ್ತೂರಿ ವರದಿಗಾರ ಪುಟ್ಟಸ್ವಾಮಿ, ಪಸ್ಟ್ ನ್ಯೂಸ್ ವರದಿಗಾರ ಪ್ರವೀಣ್ ಬಿಸಿ ಸುದ್ದಿ ಸಂಪಾದಕರಾದ ಚಳ್ಳಕೆರೆ ಬಸಣ್ಣ, ಸುದ್ದಿಗಿಡುಗ ಸಂಪಾದಕರಾದ ಶ.ಮಂಜುನಥ್ ಕನ್ನಡ ಸಂಪಿಗೆ ತಿಪ್ಪೇಸ್ವಾಮಿ,ಸುರೇಶ್ ಪಟ್ಟಣ್, ಕ್ಯಾಮರಾ ಮೆನ್ ಗಳಾದ ಚಂದ್ರು ,ದ್ವಾರಕನಾಥ್ ಅಂಜಿನಪ್ಪ ಮತ್ತು ವಿವಿದ ವಿದ್ಯುನ್ಮಾನ ಮಾಧ್ಯಮಗಳ ಜಿಲ್ಲಾ ವರದಿಗಾರರು ಹಾಜರಿದ್ದರು.