ಶ್ರೀರಾಮುಲು ಗೆಲ್ಲಿಸಿದ ಮೊಳಕಾಲ್ಮುರು ಕ್ಷೇತ್ರದ ಜನರಿಗೆ ರಾಜಯೋಗ.
1 min readಡಿ. ದೇವರಾಜ ಅರಸು ವಸತಿ ಯೋಜನೆಯಡಿ ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯ ವಿಶೇಷ ವರ್ಗದ ಅಲೆಮಾರಿ, ಅರೆ ಅಲೆಮಾರಿ ಹಾಗೂ ಗೊಲ್ಲ ಸಮುದಾಯದ ನಿವೆಶನ ಹೊಂದಿರುವ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಶ್ರೀರಾಮುಲು 2797 ಮನೆಗಳ ಮಂಜೂರು ಮಾಡಿಸುವಲ್ಲಿ ರಾಮುಲು ಯಶಸ್ವಿಯಾಗಿದ್ದು ಬಹುತೇಕ ಎಲ್ಲಾರಿಗೂ ಮನೆ ಸಿಗುವ ಭಾಗ್ಯ ದೊರೆತಿದೆ.
ವಿಶೇಷ ವರದಿ: ಮೊಳಕಾಲ್ಮುರು ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ರಾಜಯೋಗ ಬಂದಿದೆ ಎಂದರೆ ತಪ್ಪಗಲಾರದು. ಹಿಂದುಳಿದ ತಾಲೂಕು ,ಬರದ ತಾಲೂಕು ಎಂಬ ಸಾಲು ಹಣೆಪಟ್ಟಿಗಳನ್ನು ಕಳಚಿಕೊಂಡು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದ. ಇದಕ್ಕೆ ಕಾರಣ ಮೊಳಕಾಲ್ಮುರು ಕ್ಷೇತ್ರದಿಂದ ಶಾಸಕರಾಗಿ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಬಿ.ಶ್ರೀರಾಮುಲು ಅವರನ್ನು ಜನರು ಆಯ್ಕೆ ಮಾಡಿ ಕಳಿಸಿದ್ದಕ್ಕೆ ಸಾರ್ಥಕವಾಯಿತು ಎಂದು ಜನರು ಕ್ಷೇತ್ರದ ತುಂಬ ಮಾತನಾಡಿಕೊಳ್ಳುತ್ತಿದ್ದಾರೆ.
* ತುಂಗಭದ್ರಾ ಹಿನ್ನೀರು ಕುಡಿಯುವ ನೀರು ಯೋಜನೆ.
* ಅಪ್ಪರ್ ಭದ್ರಾ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ.
* ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ 0.25 ಟಿಎಂಸಿ ನೀರು ಒದಗಿಸಿದ್ದಾರೆ.
* ಅಂಗವಿಕಲರಿಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ 100 ವಾಹನಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.
* ಮೊಳಕಾಲ್ಮೂರನಲ್ಲಿ ಸ್ವಂತ ವೆಚ್ಚದಲ್ಲಿ ನಿತ್ಯ ಅನ್ನ ದಾಸೋಹ ಅನ್ನಪೂರ್ಣ ಕಾರ್ಯಕ್ರಮ ತನ್ನ ಸ್ವಂತ ಖರ್ಚಿನಲ್ಲಿ ಮಾಡಿಸುತ್ತಿದ್ದಾರೆ. ನೂರಾರು ಹಳ್ಳಿಗಳಿಗೆ ವಾಣಿವಿಲಾಸ ಸಾಗರ ನೀರು 24 ಗಂಟೆಯಲ್ಲಿ ತರುವಲ್ಲಿ ಯಶಸ್ವಿಯಾದರು. ಇದರ ಜೊತಗೆ 77 ಕೆರೆಗಳ ತುಂಬಿಸುವ ಯೋಜನೆಗೆ ಭೂಮಿ ಪೂಜೆ ಮುಗಿದಿದ್ದು ಕೆಲಸ ಆರಂಭವಾಗಿದೆ.
ಡಿ. ದೇವರಾಜ ಅರಸು ವಸತಿ ಯೋಜನೆಯಡಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳೂ ಸೇರಿದಂತೆ 30 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ, ಅರೆ ಅಲೆಮಾರಿ ವರ್ಗದ, ನಿವೇಶನ ಹೊಂದಿರುವ ಗೊಲ್ಲ ಸಮುದಾಯದವರಿಗೆ ವಸತಿ ಸೌಕರ್ಯ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡಿದೆ.
ಈ ಯೋಜನೆ ಅಡಿಯಲ್ಲಿಯೇ,
ಚಿತ್ರದುರ್ಗ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿನ ದಾಖಲೆ ಸಂಖ್ಯೆಯ 3769 ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯ ವಿಶೇಷ ವರ್ಗದ ಅಲೆಮಾರಿ, ಅರೆ ಅಲೆಮಾರಿ ಹಾಗೂ ಗೊಲ್ಲ ಸಮುದಾಯದ ನಿವೆಶನ ಹೊಂದಿರುವ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಶ್ರೀರಾಮುಲು 2797 ಮನೆಗಳ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು ಭವಿಷ್ಯ ಇತಿಹಾಸದಲ್ಲಿ ಒಮ್ಮೆಲೇ ಈ ದೊಡ್ಡ ಪ್ರಮಾಣದ ಮನೆಗಳನ್ನು ಕಟ್ಟಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಇಂತಹ ಹಿಂದುಳಿದ ವರ್ಗಗಳ ನಾಯಕ ರಾಮುಲು ಮಾತ್ರ ಮೊಳಕಾಲ್ಮುರು ಕ್ಷೇತ್ರದಲ್ಲಿ ಅಭಿವೃದ್ಧಿ ರಥವನ್ನು ಸದ್ದಿಲ್ಲದೆ ಎಳೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಟೀಕೆಗಳು ನಡೆಯುತ್ತವೆ ಆದರೆ ಟೀಕೆಗೆ ಕೆಲಸದ ಮೂಲಕ ಉತ್ತರ ನೀಡುತ್ತಿರುವ ಸಚಿವ ರಾಮುಲು ವಿರೋಧಿಗಳಿಗೆ ಅಭಿವೃದ್ಧಿ ಗುದ್ದು ಸರಿಯಾಗಿ ಗುದ್ದುತ್ತಿದ್ದಾರೆ. ಇವರು ಇಷ್ಟು ಮನೆಗಳನ್ನು ಕ್ಷೇತ್ರ ತರುವ ಜೊತೆಗೆ ಶ್ರೀರಾಮುಲು ಸದಾ ಹಿಂದುಳಿದವರ, ಬಡವರ, ಕೂಲಿಕಾರ್ಮಿಕ ಪರ ನಿಂತು ಕೆಲಸ ಮಾಡುವುದರಲ್ಲಿ ಎತ್ತಿದ ಕೈ ನಮ್ಮ ಶ್ರೀರಾಮುಲು.ಕಾಯಕದ ಬಗ್ಗೆ ಆಸಕ್ತಿ ಇದ್ದರೆ ಇಂತಹ ಜನಮೆಚ್ಚುಗೆ ಗಳಿಸಲು ಸಾಧ್ಯ.