ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ; ಹಿರಿಯ ನಾಗರೀಕರ ಬಗ್ಗೆ ಕಾಳಜಿ ಇರಲಿ: ಡಿಸಿ.ಕವಿತಾ.ಎಸ್ ಮನ್ನಿಕೇರಿ
1 min read“ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ”
ಚಿತ್ರದುರ್ಗ, ಅಕ್ಟೋಬರ್.1 :
ಚಿತ್ರದುರ್ಗ: ಸರ್ಕಾರ ಹಿರಿಯ ನಾಗರಿಕರಿಗೆ ಕಲ್ಪಿಸಿರುವ ಯೋಜನೆಗಳು ಹಾಗೂ ಇದರ ಪ್ರಯೋಜನವನ್ನು ಹಿರಿಯ ನಾಗರೀಕರಿಗೆ ಸಿಗುವಂತೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ನೋಡಿಕೊಳ್ಳಬೇಕೆಂದು ಲಜಿಲ್ಲಾಧಿಕಾರಿ ಕವಿತಾ. ಎಸ್ ಮನ್ನಿಕೇರೆ ತಿಳಿಸಿದರು.
ಜಿಲ್ಲಾಡಳಿತ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕರ ಬಗ್ಗೆ ಕಾಳಜಿ, ಗೌರವ ಎಲ್ಲರಿಗೂ ಇರಬೇಕು, ಎಲ್ಲರಿಗೂ ವೃದ್ಧಾಪ್ಯ ಬರುತ್ತದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವ ಗಾದೆ ಮಾತನ್ನು ಹೇಳುವ ಮೂಲಕ ಹಿರಿಯರ ಘನತೆ, ಗೌರವದ ಬಗ್ಗೆ ತಿಳಿಸಿದರು.
ನಾವು ನಮ್ಮ ಹಿರಿಯ ನಾಗರಿಕರನ್ನು ಹೇಗೆ ನೋಡಿಕೊಳ್ಳುತ್ತೇವೆ. ಅದೇ ರೀತಿಯಲ್ಲಿ ನಮ್ಮ ಕಿರಿಯರು ರೂಢಿಸಿಕೊಳ್ಳುತ್ತಾರೆ. ಕೋವಿಡ್-19 ಹಿನ್ನಲೆಯಲ್ಲಿ ಹಿರಿಯರನ್ನು ಅತಿ ಹೆಚ್ಚಾಗಿ ಜಾಗೃತಿ ಯಿಂದ ನೋಡಿಕೊಳ್ಳಬೇಕು. ಹಿರಿಯರನ್ನು ಗೌರಿವಿಸಿ, ಪ್ರೀತಿ ವಿಶ್ವಾಸ ಮತ್ತು ಕಾಳಜಿಯಿಂದ ನೋಡಿಕೊಳ್ಳಿ ಎಂಬ ಹಿತನುಡಿಗಳನ್ನು ಎಲ್ಲಾರಿಗೂ ಮನದಟ್ಟು ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಮಾತನಾಡಿ ಹಿರಿಯರ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ದರಾಗಿರುತ್ತದೆ. ಯಾವುದೇ ಸಮಸ್ಯೆಯಾದಲ್ಲಿ ನಮಗೆ ತಿಳಿಸಿ, ಹಿರಿಯರ ರಕ್ಷಣೆಗೂ ಕಾನೂನು ಇದ್ದು ಹಿರಿಯರನ್ನು ಪಾಲನೆ, ಪೋಷಣೆ ಹಾಗೂ ರಕ್ಷಣೆ ಮಾಡುವುದು ಕುಟುಂಬದ ಸದಸ್ಯರ ಜವಾಬ್ದಾರಿ ಮತ್ತು ಇದು ಸಮಾಜದ ಜವಾಬ್ದಾರಿಯು ಆಗಿದೆ ಎಂದು ತಿಳಿಸಿದರು. ಹಿರಿಯರು ಸ್ವಾಭಿಮಾನದಿಂದ ಸಕ್ರಿಯವಾಗಿ, ಆರೋಗ್ಯವಂತರಾಗಿ ಮತ್ತು ಗೌರವಯುತವಾಗಿ ಸಮಾಜದಲ್ಲಿ ಬದುಕಬೇಕಾಗಿದೆ. ಜೀವನದ ಸಂಧ್ಯಾ ಕಾಲದಲ್ಲಿರುವ ಹಿರಿಯ ನಾಗರಿಕರು ಒಂಟಿತನ, ಮಾನಸಿಕ ಯೋಚನೆ, ಆರ್ಥಿಕ ಮುಗ್ಗಟ್ಟು, ಅನಾರೋಗ್ಯ, ಮುಂತಾದ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಾರೆ. ವಯೋವೃದ್ಧರ ಈ ಸಮಸ್ಯೆಗಳನ್ನು ಬಗೆಹರಿಸಿ, ಸಂಧ್ಯಾಕಾಲದಲ್ಲಿ ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿಕೊಡುವುದು ಇಂದಿನ ಸಮಾಜದ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸಿ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು “ಹಿರಿಯ ನಾಗರಿಕರ ರಾಷ್ಟ್ರ ನೀತಿ” ಯನ್ನು ರೂಪಿಸಿದ್ದು, ಈ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ 2008 ಏಪ್ರಿಲ್ 01 ರಿಂದ ಜಾರಿಗೊಳಿಸಲಾಗಿದೆ.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳ ನಿವಾರಣೆಗಾಗಿ ತುರ್ತು ಸಹಾಯಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಲೋಕಾಯುಕ್ತ ಕಚೇರಿ ಆವರಣ ಚಿತ್ರದುರ್ಗ ಇಲ್ಲಿ ಸ್ವಯಂ ಸೇವಾ ಸಂಸ್ಥೆಯ ಮೂಲಕ ನಡೆಸುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ಹಿರಿಯ ನಾಗರಿಕರಿಗಾಗಿ ಹಗಲು ಯೋಗಕ್ಷೇಮ ಕೇಂದ್ರವನ್ನು ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಸ್ವಯಂ ಸೇವಾ ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ. ಇಲ್ಲಿ ಲಘು ಉಪಹಾರ, ಮನೋರಂಜನೆ ಕಾರ್ಯಕ್ರಮಗಳು, ಸುದ್ದಿ ಪತ್ರಿಕೆಗಳ ವ್ಯವಸ್ಥೆ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ 02 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿದ್ದು 1. ಶ್ರೀ ಸದ್ಗರು ಕಬೀರಾನಂದ ವಿದ್ಯಾಪೀಠ(ರಿ) ವತಿಯಿಂದ, ಸದ್ಗರು ಕಬೀರಾನಂದ ವೃದ್ಧಾಶ್ರಮ, ಕರುವಿನಕಟ್ಟೆ ಸರ್ಕಲ್, ಚಿತ್ರದುರ್ಗ ಹಾಗೂ ಶ್ರೀ ರಾಜಯೋಗಿ ಸಿದ್ಧಾರ್ಥ ಎಜುಕೇಷನ್ ಸೊಸೈಟ್(ರಿ), ವತಿಯಿಂದ ಕೋಟೆ ರಸ್ತೆ, ಗವಿರಂಗನಾಥ ದೇವಸ್ಥಾನದ ಹತ್ತಿರ, ಹೊಸದುರ್ಗದಲ್ಲಿ ಇದ್ದು , ಇಲ್ಲಿ ಹಿರಿಯ ನಾಗರಿಕರಿಗೆ ಲಘು ಉಪಹಾರ, ಮನೋರಂಜನೆ ಕಾರ್ಯಕ್ರಮಗಳು, ಸುದ್ದಿ ಪತ್ರಿಕೆಗಳ ವ್ಯವಸ್ಥೆ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅನುದಾನ ರಹಿತವಾಗಿ ಜಿಲ್ಲೆಯಲ್ಲಿ 03 ವೃದ್ಧಾಶ್ರಮಗಳು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುತ್ತಿವೆ. 1. ರಾಜಲಕ್ಷ್ಮೀ ಅಸೋಸಿಯೇಷನ್ (ರಿ). ವತಿಯಿಂದ ವೃದ್ಧಾಶ್ರಮ,2. ಶ್ರೀ ಮಾನ್ಯ ವೃದ್ದಾಶ್ರಮ ವಿಠಲ್ ನಗರ ಚಿತ್ರದುರ್ಗ ರಸ್ತೆ, ಚಳ್ಳಕೆರೆ 3. ಬನಶ್ರೀ ವೃದ್ಧಾಶ್ರಮ, ನಾಯಕನಹಟ್ಟಿ ರಸ್ತೆ, ವೆಂಕಟೇಶ್ವರ ನಗರ, ಚಳ್ಳಕೆರೆ.
ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ಕಾಯ್ದೆ-2007 ರ ಯಡಿ ಉಪವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣೆ ನ್ಯಾಯಾಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು, 2020-21 ನೇ ಸಾಲಿನಲ್ಲಿ 14 ದೂರು ಅರ್ಜಿಗಳು ಸ್ವೀಕೃತ ವಾಗಿದ್ದು, ಅದರಲ್ಲಿ 12 ಅರ್ಜಿ ವಿಲೇವಾರಿಯಾಗಿದ್ದು, 02 ಅರ್ಜಿಗಳು ವಿಚಾರಣಾ ಹಂತದಲ್ಲಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಲೆ ,ಸಾಹಿತ್ಯ, ಕಾನೂನು, ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 5 ಜನ ಹಿರಿಯ ನಾಗರಿಕರಿಗೆ ಜಿಲ್ಲಾ ಮಟ್ಟದಲ್ಲಿ ಗೌರವಿಸಿ ಸನ್ಮಾನಿಸಲಾಯಿ : 66 ವರ್ಷದ ಹೆಚ್. ಚಂದ್ರಪ್ಪ ಪ್ರಾಧ್ಯಾಪಕರು, ತೋಟಗಾರಿಕೆ (ನಿ) ಹಿರಿಯೂರು (ವಾರ್ಡ್ ನಂ.21) ಚಿತ್ರದುರ್ಗದ ಹಿರಿಯ ನಾಗರಿಕ ಸಮಾಜ ಸೇವೆ ಸಾಧನೆ 64 ವರ್ಷದ ಎನ್.ಆರ್. ನಾಗರಾಜ ಬಿನ್ ನೀರಗಂಟಿ ರಂಗನಾಯಕ ನಗರಂಗೆರೆ (ಅಂಚೆ), ಚಳ್ಳಕೆರೆ ತಾಲ್ಲೂಕಿ ಇವರು ಸಮಾಜ ಸೇವೆ ಸಾಧನೆ, ಎನ್. ರಾಮುಲು, ಕವಿಗಳು, ನಿವೃತ್ತ ವಲಯ ಅರಣ್ಯಾಧಿಕಾರಿಗಳು, ಜವಾಹರ್ ಶಾಲೆ ಹತ್ತಿರ, ಮೊಳಕಾಲ್ಮೂರು ಟೌನ್ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ, (66) ಬಿ.ಕೆ ರೆಹಮತ್‍ಉಲ್ಲಾ ಬಿನ್ ಬಿ,ಕೆ. ಅಬ್ದುಲ್ ಸತ್ತರ್ ಸಾಬ್ ಚಿತ್ರದುರ್ಗದ ಇವರು ಕಾನೂನು ಹಾಗೂ ಸಾಮಾಜ ಸೇವೆ ಸಾಧನೆ, (65) ವರ್ಷದ ಜಿ.ಎನ್.ಗೋದಾಳಪ್ಪ, ಚಿತ್ರದುರ್ಗ ತಾಲ್ಲೂಕಿನ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಸಂಗಮ್, ಡಾ. ರಾಮಚಂದ್ರ ನಾಯಕ ಹಾಗೂ ಇನ್ನಿತರೆ ಹಿರಿಯ ನಾಗರೀಕರು ಉಪಸ್ಥಿತರಿದ್ದರು.
