ವಸತಿ ಶಾಲೆ ಪ್ರವೇಶ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನ.
1 min readಚಿತ್ರದುರ್ಗ,ಅಕ್ಟೋಬರ್03:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮೊರಾರ್ಜಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ 6 ರಿಂದ 12ನೇ ತರಗತಿಯವರಿಗೆ ಖಾಲಿ ಇರುವ ಸೀಟುಗಳಿಗೆ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ.
ವಸತಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ದೊರೆಯುವ ಸ್ಥಳ: ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿರಿಯೂರು ತಾಲ್ಲೂಕು ದೇವರಕೊಟ್ಟ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಳ್ಳಕೆರೆಯ ಶಾಂತಿನಗರದ ಸಾಯಿ ಚೈತನ್ಯ ಶಾಲೆ ಆವರಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆ, ಚಿತ್ರದುರ್ಗ ನಗರದ ಸ್ಟೇಡಿಯಂ ರಸ್ತೆಯ ಆಂಜನೇಯ ದೇವಸ್ಥಾನದ ಎದುರು, ಶ್ರೀರಾಮ ಕಾಂಪ್ಲೆಕ್ಸ್ 3ನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಚಳ್ಳಕೆರೆ ವಾಲ್ಮೀಕಿ ನಗರದ ಗಣೇಶ ದೇವಸ್ಥಾನ ಹಿಂಭಾಗದ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ, ಹಿರಿಯೂರು ವೇದಾವತಿ ನಗರದಲ್ಲಿರುವ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ, ಹೊಸದುರ್ಗ ಸಿದ್ದರಾಮ ನಗರದ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರ, ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆ ಮುಂಭಾಗದ ಕರ್ನಾಟಕ ಬ್ಯಾಂಕ್ ಮೇಲುಗಡೆ, 1ನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಿ ಕೇಂದ್ರ, ಮೊಳಕಾಲ್ಮುರು ಪದ್ಮಶಾಲಿ ಕಲ್ಯಾಣಮಂಟಪದ ಹತ್ತಿರ ಜವಾಹರ ಶಾಲೆ ಎದುರುಗಡೆ ಇರುವ ಅಲ್ಪಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರದಲ್ಲಿ ಅರ್ಜಿ ದೊರೆಯುತ್ತದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.