September 17, 2024

Chitradurga hoysala

Kannada news portal

ತಾಳ್ಮೆಯಿಂದ ಉಪ ಮುಖ್ಯಮಂತ್ರಿ ಸ್ಥಾನ ಒಲಿಯಲಿದೆ: ಬಿ.ಶ್ರೀರಾಮುಲು

1 min read

ಬಳ್ಳಾರಿ ಅ 16 : ತಾಳ್ಮೆಯಿಂದ ಇದ್ದರೆ ಮುಂದಿನ‌ ದಿನಗಳಲ್ಲಿ ಉಪ ಮುಖ್ಯ ಮಂತ್ರಿ ಸ್ಥಾನವೂ ದೊರೆಯಬಹುದು ಎಂದು ಸಮಾಜ‌ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿ ಉನ್ನತ ಸ್ಥಾನಮಾನವನ್ನು ಪಡಿಯಬೇಕೆಂದರೆ ತಾಳ್ಮೆಯಿಂದ ಇರ ಬೇಕಾಗುತ್ತೆ. ನನ್ನ ಶ್ರದ್ಧೆ ನೋಡಿ ಬರುವ ದಿನಗಳಲ್ಲಿ ತಮಗೆಬ ಡಿಸಿಎಂ ಸ್ಥಾನ ನೀಡಬಹುದು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಡಿಸಿಎಂ ಸ್ಥಾನಮಾನ ಸಿಗಬೇಕೆಂಬುದು ನನ್ನ ಅಭಿಮಾನಿಗಳ ಅಪೇಕ್ಷೆ ನನ್ನ‌ಬೇಡಿಕೆ ಅಲ್ಲ ಎಂದರು. ದೇವರ ಆಶೀರ್ವಾದ ಇದ್ದರೆ ಮುಂದೊಂದು ದಿನ ಆ ಸ್ಥಾನಮಾನ ದೊರಕಬಹುದೆಂದರು. ರಾಜ್ಯದಲ್ಲಿ ನಡೆಯುತ್ತಿರುವ ಸಿರಾ, ಮತ್ತು ಆರ್.ಆರ್ ನಗರ ಉಪಚುನಾವಣೆ ಫಲಿತಾಂಶದ ಆಧಾರದ ಮೇಲೆ ಮುಂದನ‌ ತೀರ್ಮಾನಗಳು ನಡೆಯಲಿವೆಂದರು. ಸಮಾಜ ಕಲ್ಯಾಣ ಖಾತೆಯೊಂದಿಗೆ ಹಿಂದುಳಿದ ವರ್ಗಗಳ ಖಾತೆಯ ಜವಾಬ್ದಾರಿಯನ್ನು ನೀಡಬೇಕಿತ್ತು ಎಂಬ ಪ್ರಶ್ನೆಗೆ ಉಪಚುನಾವಣೆಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸ ಇದೆ. ಅದರ ಫಲಿತಾಂಶದ ಆಧಾರದ ಮೇಲೆ ನನ್ನ ಸ್ಥಾನಮಾನದ ಬಗ್ಗೆ ಸಹ ನಿರ್ಧಾರವಾಗಲಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನು ಒಬ್ಬರೇ ನೋಡಿಕೊಳ್ಳಬೇಕು ಎಂಬ ಬಗ್ಗೆ ತಾಂತ್ರಿಕವಾಗಿ ತಮ್ಮಗಳ ಅಭಿಪ್ರಾಯವನ್ನ ಹಲವರು ವ್ಯಕ್ತಪಡಿಸಿದ್ದಾರೆ. ಅದರಂತೆಯೇ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಒಂದೇ ಆಗಿರೋದರಿಂದ ಅವುಗಳನ್ನ ಬೇರ್ಪಡಿಸೋದು ಅಗತ್ಯವಿರಲಿಲ್ಲ ಅಂತ ಸಹ ಹೇಳುತ್ತಿದೆ. ಆದರೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿಕೊಡುವ ಸಲುವಾಗಿಯೇ ಮುಖ್ಯಮಂತ್ರಿಗಳು ಕೆಲ ಖಾತೆಗಳನ್ನ ಅವರ ಬಳಿಯೇ ಇಟ್ಟುಕೊಂಡಿದ್ದಾರೆ ಎನ್ನುವ ಮೂಲಕ ಖಾತೆ ತಮಗೆ ಸಮಾಜ ಕಲ್ಯಾಣ ಇಲಾಖೆ ಒಂದನ್ನೇ ನೀಡಿರುವುದರ ಬಗ್ಗೆ ತಮ್ಮನ್ನು ತಾವು ಸಮರ್ಥಿಸಿಕೊಂಡರು.

ನನ್ನ ಆಯ್ಕೆ:
ಸಮಾಜ ಕಲ್ಯಾಣ ಖಾತೆ ನನ್ನ ಆಯ್ಕೆ. ಮಾಜಿ ಸಿಎಂ ಡಿ.ದೇವರಾಜ ಅರಸು ಸೇರಿದಂತೆ ಇನ್ನಿತರೆ ಅನೇಕ ಮಹನೀಯರು ಸೇವೆ ಸಲ್ಲಿಸಿದ ಈ ಖಾತೆಯ ಜವಾಬ್ದಾರಿಯನ್ನು ನಾನು ಪಡೆದುಕೊಂಡಿರುವೆ.‌ ಈಗಾಗಲೇ ನಾನು ಅರಸು ಕಾಲದ ಕಡತಗಳನ್ನು ಅಧ್ಯಯನ‌ ಮಾಡುತ್ತಿರುವೆ. ಹಿಂದುಳಿದ ಹಾಗೂ ಬಡ ಜನರ ಕಲ್ಯಾಣಕ್ಕಾಗಿ ಶ್ರಮಿಸಲು ನನಗೆ ಈ ಖಾತೆ ಸೂಕ್ತವಾಗಿದೆ‌. ಆರೋಗ್ಯ ಇಲಾಖೆಯಲ್ಲಿ ಮಾಡಿದ ಒಂದಿಷ್ಟು ಉತ್ತಮ ಕಾರ್ಯಗಳನ್ನು ನೋಡಿ ಸಿಎಂ ಅವರು ಈ ಖಾತೆಯನ್ನು ನನ್ನ ಹೆಗಲಿಗೆ ಹಾಕಿದ್ದಾರೆ ಎಂದರು. ಕೊರತೆ ಮಾಡಿಲ್ಲ:
ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಹಾಗೂ ಕಷ್ಟಪಟ್ಟ ಜೀವಿಗಳಿಗೆ ಬೆಲೆ ಇದ್ದೇ ಇದೆ. ನನಗೂ ಕೂಡ ಪಕ್ಷ ಯಾವುದೇ ರೀತಿಯ ಕೊರತೆ ಮಾಡಿಲ್ಲ. ನನ್ನ ಶ್ರಮಕ್ಕೆ ತಕ್ಕಂತೆ ಪಕ್ಷ ಹುದ್ದೆಯನ್ನು ನೀಡುವುದರೊಂದಿಗೆ ಗೌರವವನ್ನು ಸಹ ಇಟ್ಟುಕೊಂಡಿದೆ. ಜವಾಬ್ದಾರಿ ನೀಡುವಲ್ಲಿ ಪಕ್ಷ ಕಮ್ಮಿ ಮಾಡಿಲ್ಲ ಅನ್ನೋದರ ಮೂಲಕ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಆಗಮನದಿಂದ ತಮ್ಮ ಘನತೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂಬ ಮಾತನ್ನು ಹೊರ ಹಾಕಿದರು.

About The Author

Leave a Reply

Your email address will not be published. Required fields are marked *