ಅಕ್ಟೋಬರ್ 23ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
1 min readಚಿತ್ರದುರ್ಗ, ಅಕ್ಟೋಬರ್22:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ನೆಹರು ಯುವ ಕೇಂದ್ರ ಚಿತ್ರದುರ್ಗ ರೈಫಲ್ ಕ್ಲಬ್, ಪ್ರಜಾಸೇವಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ, ಎಸ್‍ವೈಎಎಸಿ ಚಾರಿಟೇಬಲ್ ಟ್ರಸ್ಟ್, ಸರ್ಕಾರಿ ಕಲಾ ಕಾಲೇಜು ಎನ್‍ಸಿಸಿ ಹಾಗೂ ಯುವ ರೆಡ್‍ಕ್ರಾಸ್ ಘಟಕ, ಎಸ್‍ಜೆಎಂ ಔಷಧ ಮಹಾವಿದ್ಯಾಲಯ ಯುವ ರೆಡ್‍ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶರಣ ಸಂಸ್ಕøತಿ ಉತ್ಸವ ಮತ್ತು ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅಕ್ಟೋಬರ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 4ರವೆರೆಗೆ ನಗರದ ಮುರುಘಾಮಠದಲ್ಲಿ ಆಯೋಜಿಸಲಾಗಿದೆ.
ಯಾರು, ಯಾರು ರಕ್ತದಾನ ಮಾಡಬಹುದು: ಹೆಣ್ಣು ಗಂಡು ಎಂಬ ಭೇದವಿಲ್ಲದೆ 18 ರಿಂದ 60 ವರ್ಷದೊಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಿಯ ದೇಹದ ತೂಕ 45 ಕೆಜಿಗಿಂತ ಹೆಚ್ಚು ಹೊಂದಿರಬೇಕು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂಗಿಂತ ಕಡಿಮೆ ಇರಬಾರದು. ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಒಂದು ಬಾರಿಗೆ ಕೇವಲ 350 ಎಂ.ಎಲ್ ರಕ್ತವನ್ನು ಮಾತ್ರ ತೆಗೆದುಕೊಳ್ಳಲಾಗುವುದು.
ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು: ಹೃದಯಘಾತ ಆಗುವ ಸಂಭವ ಕಡಿಮೆಯಾಗುವುದು. ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು. ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುವುದು. ಮುಖ್ಯವಾಗಿ ಇತರರ ಜೀವ ಉಳಿಸಿದಂತಾಗುವುದು.
ಹೆಚ್ಚಿನ ಮಾಹಿತಿಗಾಗಿ 9448083139, 9448078343 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.