April 23, 2024

Chitradurga hoysala

Kannada news portal

ನಿಮಗೆ ಕೂದಲು ಉದುರುತ್ತಿವೆಯಾ ಮಿಸ್ ಮಾಡದೆ ಓದಿ.

1 min read

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದಗದೀರಾ…? ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ತಲುಪುವುದು ನಿಧಾನವಾಗುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ.

ಸೀಸನಲ್ ಫ್ರುಟ್ಗಳನ್ನು ಯಥೇಚ್ಛವಾಗಿ ಸೇವಿಸಿ. ಇದು ಕೂದಲು ಉದ್ದಕ್ಕೆ ಬೆಳೆಯಲು ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಬಿ, ಸತು, ಫೈಬರ್ ಮತ್ತಿತರ ಅತ್ಯಗತ್ಯ ಕೊಬ್ಬಿನಾಮ್ಲಗಳಿದ್ದು ಇವು ಎಣ್ಣೆ ಹಾಗೂ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.

ಮೀನಿನಲ್ಲಿ ಕೊಬ್ಬಿನಾಮ್ಲ ಹೇರಳವಾಗಿದ್ದು ಇದು ಕೂದಲು ಉದುರುವುದನ್ನು ನಿಲ್ಲಿಸುತ್ತವೆ. ಮೀನಿನೆಣ್ಣೆ ಕೂದಲಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಂಶೋಧನೆಗಳು ಇದನ್ನು ದೃಢಪಡಿಸಿದ್ದು ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಕೂದಲು ತೆಳುವಾಗುತ್ತಿದ್ದ ಮಹಿಳೆಯರ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿದೆ.

About The Author

Leave a Reply

Your email address will not be published. Required fields are marked *