ಮನುಷ್ಯ ಸಮಾಜಕ್ಕೆ ಮತ್ತು ಬದುಕಿಗೆ ಬಹುಮುಖಿಯತೆ ಬಹಳ ಮುಖ್ಯ:ಡಾ.ಬಂಜೆಗೆರೆ ಜಯಪ್ರಕಾಶ್ ಅಭಿಮತ
1 min readಡಾ.ಜೆ.ಕರಿಯಪ್ಪ ಮಾಳಿಗೆ ಅವರ “ಬಹುಮುಖಿ” ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಕøತಿ ಚಿಂತಕ ಡಾ.ಬಂಜೆಗೆರೆ ಜಯಪ್ರಕಾಶ ಅಭಿಮತ
ಬದುಕಿಗೆ ಬಹುಮುಖಿಯತೆ ಬಹಳ ಮುಖ್ಯ
ಚಿತ್ರದುರ್ಗ:
ಮನುಷ್ಯ ಸಮಾಜಕ್ಕೆ ಹಾಗೂ ಬದುಕಿಗೆ ಬಹುಮುಖಿಯತೆ ಬಹಳ ಮುಖ್ಯವಾಗಿದೆ ಎಂದು ಸಂಸ್ಕøತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಆಶಯ ಪ್ರಕಾಶ, ಸೃಷ್ಠಿ ಸಾಗರ ಪ್ರಕಾಶನ, ಮದಕರಿ ನಾಯಕ ಸಾಂಸ್ಕøತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಜೆ.ಕರಿಯಪ್ಪ ಮಾಳಿಗೆ ಅವರ “ಬಹುಮುಖಿ” ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಹುಮುಖ ಪುಸ್ತಕ ಹೆಸರೇ ಆಕರ್ಷಕವಾಗಿದೆ. ಇದರಲ್ಲಿ ಬದುಕಿನ, ಸಂಸ್ಕøತಿಯ, ಅಸ್ತಿತ್ವದ ಬಹುಮುಖಿಯತೆ ಸೇರಿದಂತೆ ಅನೇಕ ಅರ್ಥಗಳಿವೆ. ಬದುಕಿನ ಅಸ್ತಿತ್ವದ ರೂಪಗಳು ಒಂದೇ ರೂಪ ಹಾಗೂ ನೆಲೆಯನ್ನು ಒಳಗೊಂಡಿಲ್ಲ. ಪರಸ್ಪರ ವೈರುದ್ಧದ ನಡುವೆ ಪ್ರತಿಯೊಬ್ಬ ಮನುಷ್ಯ ಬದುಕಿತ್ತಿದ್ದಾನೆ. ಬಹುಮುಖ ನೆಲೆಯುಳ್ಳವರು ಜನಸಾಮಾನ್ಯ ಹಿನ್ನಲೆಯಲ್ಲಿ ಬಂದವರು ಹಾಗಿದ್ದಾರೆ. ಇಂದಿನ ದಿನಗಳಲ್ಲಿ ಕೋಟ್ಯಂತರ ಜನರು ಬಹುಮುಖಿಯತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ವೇದ, ಶಾಸ್ತ್ರಗಳನ್ನು ಓದದೇ ಹಳ್ಳಿಯ ಜನ ತತ್ವಪದಗಳನ್ನು ಹಾಡಿದ್ದಾರೆ. ಇಂತಹ ಸಾವಿರಾರು ತತ್ವಪದಗಳನ್ನು ಜನರು ಕಟ್ಟಿದ್ದಾರೆ. ಗ್ರಾಮೀಣ ಜನರು ಬದುಕನ್ನು ಪ್ರೀತಿಸಿದವರು. ಸಂಸಾರದಲ್ಲಿದ್ದುಕೊಂಡು ಪರಾಮಾಥ್ರ್ಯದಲ್ಲಿ ಸಾಧನೆ ಮಾಡಿದ್ದಾರೆ. ಅವರದು ತತ್ವ ಹಾಗೂ ಬದುಕು ಒಂದೇ ಆಗಿತ್ತು. ನಿಜವಾದ ಆಧ್ಯಾತ್ಮ ಲೋಕ ಚಿಂತನೆ ಮಾಡುವುದೇ ಆಗಿದೆ ಎಂದು ಹೇಳಿದರು.
ಸಮಭಾವ ಮತ್ತು ಸಹಕಾರ ಮನುಷ್ಯ ಸಮಾಜವನ್ನು ಬೆಳೆಸಿವೆ ಹಾಗೂ ಬಾಳಿಸಿವೆ. ಹಾಗಾಗಿ ಗಂಡಾಂತರಗಳು ಬಂದಾಗ ಮನೋಸ್ಥೈರ್ಯವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ನಮ್ಮ ನೆಲದ, ಜನರ ಸಂಸ್ಕøತಿಯ, ವೈವಿದ್ಯತೆ ಬಗ್ಗೆ ಹಾಗೂ ನಮ್ಮ ನಡುವೆ ಇರುವ ಪವಾಡ ಪುರುಷರು ಹಾಗೂ ಸಾಧಕರನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ವಿದ್ಯಾವಂತ ಹಾಗೂ ವಿದ್ವಾಂಸ ತನ್ನ ನೆರೆ ಹಾಗೂ ನೆಲೆಯನ್ನು ಶೋಧಿಸಬೇಕು. ಈ ಕೃತಿಯಲ್ಲಿ ಚಿತ್ರದುರ್ಗದ ಹಲವು ಆಯಾಮಗಳನ್ನು ವಿಶ್ಲೇಷಣಾತ್ಮಕವಾಗಿ ಹಾಗೂ ಮಾಹಿತಿ ರೂಪದಲ್ಲಿ ದಾಖಲಿಸಲಾಗಿದೆ ಎಂದರು.
ಪ್ರಸ್ತುತ ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಮಾತನಾಡುವ ಲೇಖಕರ ಅಗತ್ಯತೆ ಇದೆ. ಅಂತಹ ಲೇಖಕರಲ್ಲಿ ಡಾ.ಕರಿಯಪ್ಪ ಮಾಳಿಗೆ ಅವರು ಒಬ್ಬರು. ಕೃತಿಯಲ್ಲಿ ಕಬ್ಬಿಣದ ಕಡಲೆಯ ಭಾಷೆಯನ್ನು ಬಳಸದೇ ಓದುಗರಿಗೆ ಮಾಹಿತಿಯನ್ನು ನೇರವಾಗಿ ಹಾಗೂ ಸಮಗ್ರವಾಗಿ ಮಂಡಿಸಿದ್ದಾರೆ. ಮಾಳಿಗೆಯವರು ಒಬ್ಬ ಶ್ರದ್ಧಾವಂತ ವಿದ್ವಾಂಸರಾಗಿದ್ದು, ಉಪನ್ಯಾಸಕರಾಗಿ, ವಾಗ್ಮಿಗಳಾಗಿ, ಜನಾನುರಾಗಿಯಾಗಿ ಹಾಗೂ ಬದ್ಧತೆಯ ಲೇಖಕರಾಗಿ ನಮ್ಮ ನಡುವೆ ಇರುವ ವಿದ್ವಾಂಸರಾಗಿದ್ದು, ಅವರಿಂದ ಇನ್ನೂ ನೂರಾರು ಕೃತಿಗಳು ಹೊರಬರಲಿ ಎಂದು ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ ಮಾತನಾಡಿ, ಸಾಹಿತ್ಯದ ಓದು ಮನಸ್ಸುನ್ನು ವಿಶಾಲಗೊಳಿಸಿ, ಚಿಂತನೆಯನ್ನು ವಿಸ್ತಾರಗೊಳಿಸುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು ಇತರೆ ಜ್ಞಾನಶಾಖೆಯ ವಿದ್ಯಾರ್ಥಿಗಳಿಗಿಂತ ಭಿನ್ನ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.
ನಮ್ಮ ಶ್ರೇಷ್ಠ ಸಂಸ್ಕøತಿಯನ್ನು ನಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿದ್ದೇವೆ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಶ್ರೇಷ್ಠವಾದ ಯಾವುದೇ ಸಾಹಿತ್ಯ ಅದು ಬದುಕಿನಿಂದ ಬರಬೇಕು. ಪ್ರತಿಭೆಯಿಂದ ಕಟ್ಟಿದ ಸಾಹಿತ್ಯ ಸಂತೋಷನ್ನು ಕೊಡಬಹುದು. ಆದರೆ ಬದುಕನ್ನು ಹಸನುಗೊಳಿಸಲು ಗ್ರಾಮೀಣ ಸಂಸ್ಕøತಿಯ ಪರಂಪರೆಯಿಂದ ಹೊರಬರಬೇಕು ಎಂದು ಹೇಳಿದರು.
ಕೃತಿಯು ತತ್ವದಿಂದ ಆರಂಭಗೊಂಡು ಜನಪದ, ರಂಗಭೂಮಿ, ಬುಡಕಟ್ಟು ಸಂಸ್ಕøತಿ, ಈ ಭಾಗದ ಆಚರಣೆಗಳು, ಅವಧೂತರು ಬಗ್ಗೆ ಪ್ರಸ್ತಾವಿಸಿದ್ದಾರೆ. ವಿಶೇಷವಾಗಿ ಲೇಖಕರು ಆರಂಭದ ಲೇಖನಗಳಲ್ಲಿ ಪ್ರಾದೇಶಿಕತೆಯನ್ನು ಕಾಣಬಹುದು. ಜೊತೆಗೆ ತಾತ್ವಿಕ, ಸಂವಾಹಕವನ್ನು ಕಾಣಬಹುದಾಗಿದೆ. ಈ ಕೃತಿಯನ್ನು ಶ್ರಮಪಟ್ಟು ಸಿದ್ದಪಡಿಸಿದ್ದಾರೆ. ಇದರಲ್ಲಿ 38 ಲೇಖನಗಳಿದ್ದು, ಲೇಖಕರ ಕ್ಷೇತ್ರಕಾರ್ಯ ಕೃತಿಯಲ್ಲಿ ದಾಖಲಾಗಿದೆ ಎಂದರು.
ಪ್ರತಿಯೊಂದು ಲೇಖನ ಓದುವಾಗ ಭಾಷೆಯ ಶಿಸ್ತು ಇರುವುದನ್ನು ಕಾಣಬಹುದಾಗಿದೆ. ಕೃತಿಯಲ್ಲಿ ಅಳವಾದ ಅಧ್ಯಯನದ ಜೊತೆಗೆ ಸ್ವಂತಿಕೆ ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಂದು ಲೇಖನದ ಕೊನೆಯಲ್ಲಿ ಲೇಖಕನ ಸಾಮಾಜಿಕ ಕಳಕಳಿ ವ್ಯಕ್ತವಾಗಿದೆ ಎಂದರು.
ಆಧುನಿಕತೆಯ ನಡುವೆಯೂ ಸಂಸ್ಕøತಿಯ ಸೊಗಡು, ಸಾಂಸ್ಕøತಿಕ ಗಟ್ಟಿತನ ಎನ್ನುವುದು ಚಿತ್ರದುರ್ಗ ಭಾಗದಲ್ಲಿ ಉಳಿದಿದ್ದು, ಸಂಸ್ಕøತಿಯ ಅಧ್ಯಯನ ಅತ್ಯಂತ ಮಹತ್ವದಾಗಿದೆ ಎಂದರು.
ಲೇಖಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ತತ್ವಪದಗಳು, ಅಜ್ಞಾತವಲಯಗಳು ನಮ್ಮನ್ನು ಎಚ್ಚರಗೊಳಿಸುವ ಪ್ರಜ್ಞೆಗಳಾಗಿದ್ದು, ಇದರಿಂದ ನಾವುಗಳು ಕ್ರಿಯಾಶೀಲರಾಗಲು ಸಾಧ್ಯ. ನಮಗೆ ಏಕಮುಖ ಬದುಕಿಗಿಂತ ವೈವಿದ್ಯಮಯ ಬದುಕು ಮುಖ್ಯವಾಗಬೇಕು. ಎಲ್ಲರೂ ಬದುಕುಗಳು ಬಹುಮುಖ್ಯ ಎಂದರು.
ಈ ಕೃತಿಯಲ್ಲಿ ನನ್ನ ಅನುಭವಗಳ ಅಭಿವ್ಯಕ್ತಿಯನ್ನು ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಟಿ.ಸುಧಾಕರ್, ಲೇಖಕ ಡಾ.ಜೆ.ಕರಿಯಪ್ಪ ಮಾಳಿಗೆ, ಆಶಯ ಪ್ರಕಾಶನದ ಗೌನಹಳ್ಳಿ ಗೋವಿಂದಪ್ಪ, ಸೃಷ್ಠಿಸಾಗರ ಪ್ರಕಾಶನದ ಮೇಘ ಗಂಗಾಧರ ನಾಯಕ್, ಮದಕರಿ ನಾಯಕ ಸಾಂಸ್ಕøತಿಕ ವೇದಿಕೆಯ ಗೋಪಾಲಸ್ವಾಮಿ ನಾಯಕ ಇದ್ದರು.