ರಸ್ತೆ ರಿಪೇರಿ ಕಾಮಗಾರಿ ಉತ್ತಮವಾಗಿರಲಿ:ಆರ್.ಎ.ಅಶೋಕ್
1 min readಹೊಳಲ್ಕೆರೆ ; ಪಟ್ಟಣದ ವಾರ್ಡ್ ನಂಬರ್ -11ರ ರಾಮಪ್ಪ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ 5 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿರುವ ಮೇಲ್ಮಟ್ಟದ ಜಲಸಂಗ್ರಹಗಾರಕ್ಕೆ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು ಪೈಪ್ ಲೈನ್ ಕಾಮಗಾರಿ ನಿರ್ವಹಿಸಿರುವ ರಸ್ತೆ ಹಾಳಾಗಿದ್ದು ಹೊಸದಾಗಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಆರ್.ಎ.ಅಶೋಕ್, ಮುಖ್ಯಾಧಿಕಾರಿಗಳಾದ ಶ್ರೀ ಎ.ವಾಸಿಂರವರು ವೀಕ್ಷಿಸಿದರು. ಗುತ್ತಿಗೆದಾರರಾದ ಶ್ರೀ ಮಜರ್ ಉಲ್ಲಾ ಖಾನ್ ರವರು ಉಪಸ್ಥಿತರಿದ್ದರು.
ವರದಿ: ವಿನಾಯಕ ಚಿತ್ರದುರ್ಗ