May 19, 2024

Chitradurga hoysala

Kannada news portal

ನಾಲಿಗೆಯಿಂದ ಬೋಧಿಸುವುದರಿಂದ ಬೆದರಿಸಬಹುದು. ಆದರೆ ಒಳ್ಳೆಯ ಕಾರ್ಯದಿಂದ ಬಲವಾಗಿ ಉಳಿಯಬಹುದು:ಆಜಾದ್

1 min read

ರಾಷ್ಟೀಯ ಶಿಕ್ಷಣ
ಇಂದು (ನವೆಂಬರ್ 11) ಭಾರತದ ಸ್ವಾತಂತ್ರ್ಯದ ಹೊನ್ನಚರಿತೆಯಲ್ಲಿ ತನ್ನದೆ ಆದ ಚಾಪನ್ನು ಮೂಡಿಸಿ ಮನೆ ಮಾತಾಗಿರುವ ಶೈಕ್ಷಣಿಕ ದಾರ್ಶನಿಕರಾದ ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರ ಜನ್ಮದಿನ. ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿ, ‘ಭಾರತರತ್ನ’ ಪ್ರಶಸ್ತಿ ಪುರಸ್ಕತರಾದ ಮೌಲಾನಾ ಅಜಾದ್‌ ರವರ ಜನ್ಮದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ದೇಶದಾದ್ಯಂತ ಶಾಲೆ-ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ.

ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಅಮೂಲ್ಯ ಕೊಡುಗೆಗಳನ್ನು ನೀಡಿ ಸದಾ ಭಾರತೀಯರ ಮನದಲ್ಲಿ ನೆಲೆಸಿದ್ದಾರೆ. ಅವರ ಸೇವೆಯನ್ನು ಸದಾ ಸ್ಮರಿಸಲು ಗೌರವ ಸಲ್ಲಿಸಲು, ಅವರ ಜನ್ಮದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ ವನ್ನಾಗಿ ಆಚರಿಸಲಾಗುತ್ತದೆ.
2008 ರ ಸೆಪ್ಟೆಂಬರ್ 11 ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಅಜಾದ್‌ ರವರ ಜನ್ಮ ದಿನ ನವೆಂಬರ್ 11 ನೇ ದಿನಾಂಕವನ್ನು ಅವರ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿಕೊಳ್ಳಲು ಅವರಿಗೆ ಗೌರವಪೂರ್ವಕವಾಗಿ’ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲು ನಿರ್ಧರಿಸಿತು.

ನವೆಂಬರ್ 11, 1888 ರಲ್ಲಿ ಮೌಲಾನಾ ಅಬ್ದುಲ್‌ ಕಲಾಂ ಅಜಾದ್ ರವರು ಜನಿಸಿದರು. ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ ‘ಅಜಾದ್ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ದಿ.

ಗಾಂಧಿಜಿಯವರ ಸ್ವದೇಶಿ ಸ್ವರಾಜ್ ಚಿಂತನೆಗಳಿಗೆ ಮಾರುಹೋºಗಿ ಅವರ ಒಡನಾಡಿಗಳಾಗಿದ್ದಾರೆ. 1912ರಲ್ಲಿ ಮುಸ್ಲಿಮರಲ್ಲಿ ದೇಶಪ್ರೇಮ ಬೆಳೆಸಲು ಅಲ್-ಹಿಲಾಲ್ ಎಂಬ ಉರ್ದು ಪತ್ರಿಕೆ ಆರಂಭಿಸಿ ಸ್ವಾತಂತ್ರ್ಯದ ಚಳುವಳಿಗೆ ಮುಸ್ಲೀಂ ಸಮುದಾಯ ಕೈಜೋಡಿಸಲು ಪ್ರೇರೇಪಕ ಶಕ್ತಿಯಾದರು
ತಮ್ಮ 35ನೇ ವರ್ಷದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅದ್ಯಕ್ಷರಾಗಿ ಆಯ್ಕೆಯಾದರು. ಪತ್ರಕರ್ತರಾಗಿ ಬ್ರಿಟಿಷ್ ಆಡಳಿತದ ವಿರುದ್ದ ಹರಿತವಾದ ಲೇಖನಗಳಿಂದ ಮನೆಮಾತಾಗಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿ ಗಾಂಧಿಯವರ ಆಪ್ತಬಳಗಕ್ಕೆ ಸೇರಿದರು.

ಭಾರತದ ಒಬ್ಬ ದಾರ್ಶನಿಕರಾಗಿಯೂ ಮತ್ತು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು ಮೌಲಾನಾ ಅಜಾದ್. ಅವರು ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೊಡುಗೆ ನೀಡಿದ್ದರು.1951ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಐಐಟಿ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತದಲ್ಲಿ ಐಐಟಿಗಳ ಸ್ಥಾಪನೆ ಮತ್ತು 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಸ್ಥಾಪಿಸಿ ವಿಶ್ವವಿದ್ಯಾನಿಲಯಗಳ ಹುಟ್ಟು ಹಾಗೂ ಉಳಿವಿಗೆ ಕಾರಣಕರ್ತರಾಗಿದ್ದಾರೆ..

ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ 1992 ರಲ್ಲಿ ಇವರಿಗೆ ಮರಣೋತ್ತರರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಗೌರವಿಸಲಾಯಿತು.
ರಾಷ್ಟೀಯ ಶಿಕ್ಷಣ ದಿನದಂದು ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಬದಲಾವಣೆ ತಂದು ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ದಿ ಎಂದು ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ಅವರ ಸೇವೆಯನ್ನು ಭಾರತೀಯರಾದ ನಾವೆಲ್ಲ ನೆನೆಯೋಣ.

ಲೇಖಕರು
ಮಹೇಶ್.ಕೆ.ಎನ್
ಮುಖ್ಯಶಿಕ್ಷಕರು
ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ,ಕಡ್ಲೇಗುದ್ದು

About The Author

Leave a Reply

Your email address will not be published. Required fields are marked *