ಹರ್ತಿಕೋಟೆಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ..
1 min readಹಿರಿಯೂರು:ನ.೧೪ ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಹನ್ನೊಂದನೆಯ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ದಿನಾಂಕ 14.11.2020 ರಂದು ಆಚರಿಸಲಾಯಿತು.
ಮಹರ್ಷಿ ವಾಲ್ಮೀಕಿಯವರ ಎತ್ತರದ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ಟ್ರ್ಯಾಕ್ಟರ್ ನಲ್ಲಿ ಅಲಂಕರಿಸಲಾಗಿತ್ತು,ಜೊತೆಗೆ ವಾಲ್ಮೀಕಿ ವಂಶಜರಾದ ಗಂಡುಗಲಿ ಕುಮಾರರಾಮ, ಹಕ್ಕ-ಬುಕ್ಕರು, ಶ್ರೀಕೃಷ್ಣದೇವರಾಯ ಭಾವಚಿತ್ರಗಳನ್ನು ಸ್ಥಾಪಿಸಿ ಪುಷ್ಪಾಲಂಕಾರಗೊಳಿಸಲಾಗಿತ್ತು,ಹೀಗೆ ಅಲಂಕರಿಸಿದ ರಥದ ಮೂಲಕ
ಗ್ರಾಮದ ರಾಜ ಬೀದಿಯಲ್ಲಿ ಯಾವುದೇ ವಾದ್ಯಗೋಷ್ಠಿ ಗಳಿಲ್ಲದೆ,ಮಹರ್ಷಿ ವಾಲ್ಮೀಕಿಗೆ ಸಂಬಂಧಿಸಿದ ಹಾಗೂ ಅವರ ರಾಮಾಯಣಕ್ಕೆ ಸಂಬಂದಿಸಿದ ಗೀತೆಗಳನ್ನ ಹಾಡಿಸುವ ಮೂಲಕ ಅತ್ಯಂತ ಸರಳವಾಗಿ ಮೆರವಣಿಗೆ ಮಾಡಲಾಯಿತು.
ನಂತರ ಪ್ರತಿ ವರ್ಷದಂತೆ ನಮ್ಮೂರ ಸರ್ಕಲ್ನಲ್ಲಿ ಸರಳ ಸಮಾರಂಭವನ್ನು ಏರ್ಪಡಿಸಲಾಗಿತ್ತು, ಈ ವರ್ಷವೂ ನಮ್ಮೂರಿನ ಗ್ರಾಮೀಣ ಪ್ರತಿಭೆಗಳಿಗೆ ಸನ್ಮಾನಿಸಿ ಗೌರವಿಸಲಾಯಿತು…
ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮೂರಿನ ನಾಲ್ವರು ಯೋಧರನ್ನು ಹಾಗೂ ಶ್ರಮಜೀವಿ ಟೈಲರ್ ಒಬ್ಬರನ್ನು ಹೀಗೆ ಐವರನ್ನು ಗೌರವಿಸಲಾಯಿತು.ಅವರನ್ನು ಈ ಕೆಳಗಿನಂತೆ ಪರಿಚಯಿಸಲಾಗಿದೆ…
೧) ಶ್ರೀ ರಘುವೀರಸಿಂಹ,ಸೈನಿಕರು,
ಮಧ್ಯಪ್ರದೇಶದ ಇಂಧೂರಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ…
೨) ಶ್ರೀ ಹರ್ಷಸಿಂಹ,ಸೈನಿಕರು,
ಪಂಜಾಬ್ ರಾಜ್ಯದ ಗುರುದಾಸಪುರ,ಪಾಕಿಸ್ತಾನ ಬಾರ್ಡರ್ ನಲ್ಲಿ ಅಂತಿಮವಾಗಿ ಸೇವೆ ಸಲ್ಲಿಸಿ ಈ ಹತ್ತು ದಿನಗಳ ಹಿಂದೆ ನಿವೃತ್ತಿ ಹೊಂದಿದ್ದಾರೆ…
೩) ಶ್ರೀ ಸುರೇಶ್,ಸೈನಿಕರು,
ಉತ್ತರಪ್ರದೇಶದ ಝಾನ್ಸಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ…
೪) ಶ್ರೀ ರಾಜೇಶ್, ಸೈನಿಕರು,
ಜಮ್ಮು ಕಾಶ್ಮೀರದ ಜಮ್ಮುವಿನಲ್ಲಿ ಸೇವೆಸಲ್ಲಿಸುತ್ತಿದ್ದಾರೆ…
ಇವರೆಲ್ಲ ನಮ್ಮ ಗ್ರಾಮದ ಹೆಮ್ಮೆಯ ವೀರ ಪುತ್ರರು,ಭಾರತಾಂಬೆಯ ದೇಶಭಕ್ತರು…
೫) ಟೈಲರ್ ಲಕ್ಷ್ಮಜ್ಜಿ, ಎಂದೇ ಹೆಸರಾಗಿರುವ ಇವರಿಗೆ ಸುಮಾರು ೮೨ ವರ್ಷ,ನಾಯಕ ಮನೆತನದವರು,ಇವರು ತರುಣ ವಯಸ್ಸಿನಿಂದಲೂ ಪ್ರತಿನಿತ್ಯ ಟೈಲರ್ ಕಾಯಕವನ್ನು,ಬಿಡುವಾದಾಗಲೆಲ್ಲ ಕೃಷಿ ಕಾರ್ಮಿಕ ಬದುಕನ್ನು ತಪಸ್ಸಿನೋಪಾದಿಯಲ್ಲಿ ಮಾಡುತ್ತಾ
ಬಂದು, ತನ್ನ ಇಬ್ಬರು ಹೆಣ್ಣು ಮೊಮ್ಮಕ್ಕಳಿಗೆ ನರ್ಸಿಂಗ್ ಶಿಕ್ಷಣವನ್ನು ಕೊಡಿಸಿದ್ದಾರೆ,ಇವರ ಕಾಯಕದ ಬದುಕು ಗ್ರಾಮೀಣ ಜನರಿಗೆ ಮಾದರಿಯಾಗಿದೆ ಮತ್ತು ಸ್ಪೂರ್ತಿ ನೀಡುವಂತಹದು…
ಇವರೆಲ್ಲರನ್ನು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಪುಷ್ಪ ಮಾಲಿಕೆಯೊಂದಿಗೆ ನೆನಪಿನ ಕಾಣಿಕೆ ನೀಡಿ ಅಭಿಮಾನ ಗೌರವಗಳೊಂದಿಗೆ ಸಂಬ್ರಮದಿಂದ ಗ್ರಾಮ ಜನತೆಯ ಮುಂದೆ ಗೌರವಾರ್ಪಣೆ ಮಾಡಲಾಯಿತು…
ಈ ಸಂದರ್ಭದಲ್ಲಿ ಹರ್ತಿಕೋಟೆ ವೀರೇಂದ್ರಸಿಂಹ ರವರು ಮಾತನಾಡುತ್ತಾ ಮಹರ್ಷಿ ವಾಲ್ಮೀಕಿ ಯವರ ಜೀವನ ಚರಿತ್ರೆ, ಮತ್ತು ಅವರ ಮಹಾಕಾವ್ಯ ರಾಮಾಯಣದ ಪ್ರಮುಖ ಘಟನೆಗಳನ್ನು ವಿವರಿಸಿ ಹಿಂಸಾ ಮಾರ್ಗವನ್ನು ತ್ಯಜಿಸಿ ಅಹಿಂಸೆಯ ಮಾರ್ಗದೆಡೆ ವಾಲ್ಮೀಕಿಯವರು ಪರಿವರ್ತನೆ ಹೊಂದಿ, ನಿಜ ಬೇಟೆಯಿಂದ ಅಕ್ಷರದ ಬೇಟೆ ಕಡೆಗೆ ಮನಸ್ಸು ಮಾಡಿ, ತಪಸ್ಸಿನೋಪಾದಿಯಲ್ಲಿ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿ ಮಹಾಕಾವ್ಯ ವನ್ನು ರಚಿಸಿ ಆದಿಕವಿ ಎಂಬ ಬಿರುದಿಗೆ ಪಾತ್ರರಾದರೆಂಬ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು,ತಮ್ಮ ತಮ್ಮ ಮಕ್ಕಳಿಗೆ ಸಾವಿಲ್ಲದ ಸಂಪತ್ತಾಗಿರುವ ಶಿಕ್ಷಣವನ್ನು ಕೊಡಿಸಲು ಕರೆ ನೀಡಿದರು.
ಇದೇ ಗ್ರಾಮದ ಇಂಜಿನಿಯರ್ ಶ್ರೀ ನವೀನಚಂದ್ರ ಎಲ್ಲರನ್ನೂ ಸ್ವಾಗತಿಸಿ,ನಿರೂಪಿಸುವ ಮೂಲಕ ಮಾತನಾಡಿ ಮಹರ್ಷಿ ವಾಲ್ಮೀಕಿ,ಬಸವ, ಕನಕ ಅಂಬೇಡ್ಕರ್ ರಂತಹ ಆದರ್ಶ ಪುರುಷರನ್ನು ಕೇವಲ ಜಾತಿಗಳಿಗೆ ಸೀಮಿತವಾಗಿಸಬಾರದು ಅವರ ಜೀವನ ಮೌಲ್ಯಗಳನ್ನು ನಾವೆಲ್ಲ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಪ್ರೋತ್ಸಾಹಿಸಬೇಕೆಂದರು.ಇಂಥಹ ಮಹಾತ್ಮರ ಜಯಂತಿಗಳನ್ನು ಸರ್ವರೂ ಕೂಡಿ ಆಚರಿಸುವಂತಾಗಲಿ ಎಂದು ಆಶಿಸಿದರು…
ಗ್ರಾಮ ಮಧ್ಯದಲ್ಲಿರುವ ಪ್ರಮುಖ ಸರ್ಕಲ್ ನಲ್ಲಿ ಆಯೋಜಿಸಲಾಗಿದ್ದ ಈ ಸರಳ ಸಮಾರಂಭದಲ್ಲಿ ಗ್ರಾಮೀಣ ಜನರು ಆಸಕ್ತಿ ಯಿಂದ ಭಾಗವಹಿಸಿದ್ದರು.. ಕೊನೆಯಲ್ಲಿ ವಂದನಾರ್ಪಣೆ ಮಾಡಿ ಪ್ರಸಾದವಿನಯೋಗ ಮಾಡಲಾಯಿತು…ಹರ್ತಿಕೋಟೆ ವೀರೇಂದ್ರಸಿಂಹ.