258 ಕುರಿಗಳಿಗೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾದ ವೈದ್ಯರು
1 min readಹಿರಿಯೂರು : ತಾಲ್ಲೂಕಿನ ಸರಸ್ವತಿಹಟ್ಟಿ ಹೊಸಹಟ್ಟಿಯ ಚಿತ್ತಪ್ಪ, ಕೆಂಚಪ್ಪ, ಶಿವಮ್ಮ ಇವರಿಗೆ ಸೇರಿದ ಸುಮಾರು 300 ಕುರಿಗಳು ವಿಷಪೂರಿತ ಮೇವು ತಿಂದು ಸಂಕಷ್ಟಕ್ಕೆ ಸಿಲುಕಿದ ವಿಷಯ ತಿಳಿದ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ತಕ್ಷಣ ತಮ್ಮ ಆಪ್ತ ಸಹಾಯಕರ ಮುಖಾಂತರ ಪಶು ವೈದ್ಯರು, ತಹಶೀಲ್ದಾರರು, ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸ್ಥಳಕ್ಕೆ ಕಳೂಹಿಸಲಾಯಿತು. 300 ಕುರಿಗಳಲ್ಲಿ 258 ಕುರಿಗಳಿಗೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. 42 ಕುರಿಗಳು ಅಸುನೀಗಿವೆ. ಕುರಿಗಳನ್ನು ಕಳೆದುಕೊಂಡಿರುವ ಕುರಿಗಾಹಿಗಳಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಮಾನ್ಯ ಶಾಸಕರು ತಿಳಿಸಿದ್ದಾರೆ.