ಐತಿಹಾಸಿಕ ರಾಜಬೀದಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ದುರ್ಗದ ರಾಜಬೀದಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ದೊಡ್ಡ ಪೇಟೆಯ ಜೈನ ದೇವಸ್ಥಾನದ ಬಳಿ ಮತ್ತು ಜಿಲ್ಲಾ ಆಸ್ಪತ್ರೆ ಹತ್ತಿರದ ಮದಕರಿ ಸರ್ಕಲ್ ಬಳಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಉಚ್ಚೆಂಗೇಲಮ್ಮನ ದೇವಸ್ಥಾನದಿಂದ ಜೋಗಿಮಟ್ಟಿ ಸರ್ಕಲ್ , ಜೋಗಿಮಟ್ಟಿ ಸರ್ಕಲ್ ಯಿಂದ ಸರ್ಕಾರಿ ಆಸ್ಪತ್ರೆ ಮುಂಭಾಗದ ಅಗಲೀಕರಣ ಮಾಡಿ ಮುಖ್ಯ ರಸ್ತೆಗೆ ಸೇರಿಸಲಾಗುವುದು. ಜೋಗಿಮಟ್ಟಿ ಸರ್ಕಲ್ ಯಿಂದ ಮದಕರಿ ಸರ್ಕಲ್ ವರೆಗೂ ಸಹ ಅಗಲೀಕರಣವನ್ನು 2 ಕೋಟಿ 57 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ಮಾಡಲಾಗುತ್ತದೆ. ಮೊದಲಿನಂತೆ ರಾಜಬೀದಿಯಂತೆ ಅಗಲೀಕರಣ ಮಾಡಿ ಇತಿಹಾಸ ಮರು ಕಳಿಸುವಂತೆ ಮಾಡುತ್ತೇವೆ ಎಂದರು. ರಸ್ತೆಯಲ್ಲಿ ಲೈಟ್ ನ ಕ್ಯಾಟಸ್ , ಬಿಳಿ ಲೈನ್ ಹಾಕಲಾಗುವುದು. ಮದಕರಿ ಸರ್ಕಲ್ ಹಗಲವಾಗಿ ಮಾಡಲಾಗುವುದ.
1ಕೋಟಿ 20 ಲಕ್ಷ. ವೆಚ್ಚದಲ್ಲಿ ಓನಕೆ ಒಬವ್ವ ಸರ್ಕಲ್ ಯಿಂದ ಮದಕರಿ ಪ್ರತಿಮೆ ಕಾಣುವಂತೆ ರಸ್ತೆ ಅಗಲೀಕರಣ ಮಾಡಲಾಗುವುದು.
ನಗರದ ಒಳ ರಸ್ತೆಗಳು ಎಲ್ಲಾ ಮುಗಿಯುವ ಹಂತದಲ್ಲಿದ್ದು ಉಳಿದ ರಸ್ತೆಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಲಾಗುವುದು.ಯಾರು ಸಹ ರಸ್ತೆ ಹಗೆಯುವುದು ಮಾಡಬಾರದು.ಸಾರ್ವಜನಿಕರು ಈ ರೀತಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ನಗರಸಭೆ ಪೌರಯುಕ್ತ ಹನುಮಂತರಾಜು, ನಗರಸಭೆ ಸದಸ್ಯರು ಇದ್ದರು.