ಶಾಸಕರ ವಿರುದ್ದ ಬಂದ ಗುತ್ತಿಗೆದಾರನ ಬೌನ್ಸರ್ ಗಳು ಪೋಲಿಸರ ವಶಕ್ಕೆ..
1 min readಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಗುಡ್ಡದ ಮಣ್ಣು ಕೊಂಡೊಯ್ಯುವ ಸಂದರ್ಭದಲ್ಲಿ ಗ್ರಾಮ ಒಂದರ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ಕಿತ್ತೋಗಿರುವ ರಸ್ತೆ ಸಮರ್ಥಿಸಿಕೊಳ್ಳಲು ಗುತ್ತಿಗೆದಾರನೊಬ್ಬ ಬೌನ್ಸರ್ ಮೂಲಕ ಶಾಸಕರಿಗೆ ಬೆದರಿಕೆ ಹಾಕಿರುವ ಪ್ರಸಂಗ ಜರುಗಿದೆ.
ಈ ಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಶಾಸಕರು ರೌಡಿಸಂ ಮಾಡಲು ಬಂದಿರುವೆಯಾ ಎಂದು ಗರಂ ಆದರಲ್ಲದೆ ಹುಷಾರಾಗಿರುವಂತೆ ಶಾಸಕರು ಗರಂ ಆದರು.
ಇದು ನಡೆದಿದ್ದು ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಗ್ರಾಮದಲ್ಲಿ ಹಾದು ಹೋಗಿರುವ ರಸ್ತೆ ಕಿತ್ತೋಗಿರುವುದರ ವಿರುದ್ಧ ಗ್ರಾಮಸ್ಥರು ದೂರು ನೀಡಿದ ಹಿನ್ನಲೆಯಲ್ಲಿ ಶಾಸಕ ತಿಪ್ಪಾರೆಡ್ಡಿಯವರು ಸಂಬಂಧಪಟ್ಟ ಗುತ್ತಿಗೆ ಕಂಪನಿ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಕಿತ್ತೋಗಿರುವ ರಸ್ತೆ ಪರಿಶೀಲನೆ ನಡೆಸಿದಾಗ ಬೌನ್ಸರ್ ಗಳ ವಿರುದ್ಧ ತಿಪ್ಪಾರೆಡ್ಡಿ ಅವರು ರೇಗಾಡಿದರು.
ಗುತ್ತಿಗೆದಾರ ಅರಣ್ಯ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದೆ ಅಕ್ರಮವಾಗಿ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಹೊಡಿಸುತ್ತಿದ್ದನಲ್ಲದೆ ಉತ್ತರ ಕರ್ನಾಟಕ ಪ್ರಭಾವ ರಾಜಕಾರಣಿಗಳು, ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಅವರಿಂದ ತಿಪ್ಪಾರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿಸಿ ಒತ್ತಡ ಹಾಕಿಸಿದ್ದನು. ಇದರಿಂದ ಆಕ್ರೋಶಗೊಂಡಿದ್ದ ಶಾಸಕರು ಕಿತ್ತು ಹೋಗಿರುವ ರಸ್ತೆ ನಿರ್ಮಾಣ ಮಾಡಿಕೊಡದ ಹೊರೆತು ಬಿಡುವುದಿಲ್ಲ ಎಂದು ಗುತ್ತಿಗೆದಾರ ಚಂದ್ರಶೇಖರ್ ಮತ್ತು ಬೌನ್ಸರ್ ಗಳ ವಿರುದ್ಧ ಕೆಂಡಕಾರಿದರು.
ಅಲ್ನೋಡು, ಇಲ್ನೋಡು, ಎಲ್ಲೆಲ್ಲೂ ಹೊಸ ರಸ್ತೆ ಕಿತ್ತೋಗಿ ತಗ್ಗು ಗುಂಡಿ ಬಿದ್ದಿದ್ದು ಮತ್ತೆ ಹೊಸ ರಸ್ತೆ ಮಾಡ್ಲಿಲ್ಲಂದ್ರೆ ಯಾವುದೇ ಸಬೂಬು ಕೇಳುವುದಿಲ್ಲ ಎಂದು ಶಾಸಕರು ಘರ್ಜಿಸಿದರು.
ದಣಿವರಿಯದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ 5 ಮಂದಿ ಬೌನ್ಸರ್ ಗಳ ಮೂಲಕ ಬೆದರಿಕೆ ಹಾಕಿದ್ದರಿಂದ ಸ್ಥಳದಲ್ಲೇ ಕೆಆರ್ ಡಿ ಇನ್ಫ್ರಾಸ್ಟ್ರಕ್ಟರ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ಶಾಸಕರು, ಗ್ರಾಮಸ್ಥರ ಕ್ಷಮೆಯಾಚಿಸಿದರು.
ಒಟ್ಟಿನಲ್ಲಿ ಹೊಸ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದರಿಂದ ಶಾಸಕರು ರಸ್ತೆ ಹೊಸದಾಗಿ ಮಾಡುವ ತನಕ ಬೀಡಬೇಡಿ ಎಂದು ತಿಳಿಸಿ ಸದ್ಯಕ್ಕೆ ಪ್ರಕರಣಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದಾರೆ.