April 23, 2024

Chitradurga hoysala

Kannada news portal

ಬುಧವಾರ ಬೆಳಗ್ಗೆ 8 ರಿಂದ ಮತ ಏಣಿಕೆ ಆರಂಭ ಅಭ್ಯರ್ಥಿಗಳಿಗೆ ಹೆಚ್ಚಿದ ಆತಂಕ.

1 min read

ಎರಡನೇ ಹಂತ ಗ್ರಾಮ ಪಂಚಾಯಿತಿ ಚುನಾವಣೆ: ಶೇ.87.80 ಮತದಾನ
ಮತ ಚಲಾಯಿಸಿದ 4.33 ಲಕ್ಷ ಮಂದಿ: ಮತಪೆಟ್ಟಿಗೆಗಳು ಭದ್ರತಾ ಕೊಠಡಿಯಲ್ಲಿ ಭದ್ರ
ಚಿತ್ರದುರ್ಗ, ಡಿಸೆಂಬರ್28:
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾಣೆ ಸಂಬಂಧ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 89 ಗ್ರಾಮ ಪಂಚಾಯಿತಿಗಳ 1475 ಸದಸ್ಯ ಸ್ಥಾನಗಳ ಸದಸ್ಯರ ಆಯ್ಕೆಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಎರಡನೇ ಹಂತದ ಚುನಾವಣೆಯಲ್ಲಿ ಶೇ.87.80 ರಷ್ಟು ಮತದಾನ ನಡೆದಿದೆ.
ಮೊಳಕಾಲ್ಮುರು ಶೇ.87.87, ಚಳ್ಳಕೆರೆ ಶೇ.88.59 ಹಾಗೂ ಹಿರಿಯೂರಿನಲ್ಲಿ ಶೇ.86.72 ರಷ್ಟು ಮತದಾನವಾಗಿದ್ದು, ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಶೇ. 87.80 ರಷ್ಟು ಮತದಾನವಾಗಿದೆ.
ಎರಡನೇ ಹಂತದ ಮೂರು ತಾಲ್ಲೂಕಿನ ಚುನಾವಣೆಗೆ ಸಂಬಂಧಿಸಿದಂತೆ ಮತದಾನವು ಬೆಳಿಗ್ಗೆ 9ಕ್ಕೆ ಶೇ.6.51, ಬೆಳಿಗ್ಗೆ 11ರ ಹೊತ್ತಿಗೆ ಶೇ.20.57, ಮಧ್ಯಾಹ್ನ 1ರ ವೇಳೆಗೆ ಶೇ.41.30, ಮಧ್ಯಾಹ್ನ 3ರವೇಳೆಗೆ ಶೇ.64.84, ಸಂಜೆ 5ಕ್ಕೆ ಶೇ.87.80 ರಷ್ಟು ಮತದಾನವಾಯಿತು. ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಡಿಮಸ್ಟರಿಂಗ್ ಪ್ರಕ್ರಿಯೆ ಕಾರ್ಯ ಮುಗಿಸಿ, ಮತಪೆಟ್ಟಿಗೆಗಳನ್ನು ಭದ್ರತಾ ಕೊಠಡಿಗಳಲ್ಲಿ ಭದ್ರಪಡಿಸಿ ಪೊಲೀಸ್ ವಶಕ್ಕೆ ನೀಡಲಾಯಿತು.
ಹಿರಿಯೂರು ತಾಲ್ಲೂಕಿನ 33, ಚಳ್ಳಕೆರೆ ತಾಲ್ಲೂಕಿನ 40 ಹಾಗೂ ಮೊಳಕಾಲ್ಮುರು ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 89 ಗ್ರಾಮ ಪಂಚಾಯಿತಿಗಳ 1668 ಸ್ಥಾನಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ಷೋಷಣೆಯಾಗಿತ್ತು. ಇದರಲ್ಲಿ 189 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಹೀಗಾಗಿ 1475 ಸದಸ್ಯ ಸ್ಥಾನಗಳಿಗೆ ಮತದಾನ ನಡೆಸಲು ಜಿಲ್ಲೆಯಲ್ಲಿ 774 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 1475 ಸದಸ್ಯ ಸ್ಥಾನಗಳಿಗೆ ಮೊಳಕಾಲ್ಮುರು ತಾಲ್ಲೂಕಿನ 689, ಚಳ್ಳಕೆರೆ ತಾಲ್ಲೂಕಿನ 1756 ಹಾಗೂ ಹಿರಿಯೂರು ತಾಲ್ಲೂಕಿನ 1372 ಅಭ್ಯರ್ಥಿಗಳು ಸೇರಿದಂತೆ ಒಟ್ಟು 3817 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
4.33 ಲಕ್ಷ ಮತದಾರರು ಹಕ್ಕು ಚಲಾವಣೆ:
***** ಎರಡನೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಒಟ್ಟು 493935 ಮತದಾರರ ಪೈಕಿ 221714 ಪುರುಷ ಮತದಾರರು, 211940 ಮಹಿಳಾ ಮತದಾರರು ಹಾಗೂ ಇತರೆ 1 ಮತದಾರರು ಸೇರಿ ಒಟ್ಟು 433655 ಮತದಾರರು ಹಕ್ಕು ಚಲಾಯಿಸಿದ್ದು, ಅಂದರೆ ಶೇ.87.80 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಮತ ಚಲಾಯಿಸಿದವರ ತಾಲ್ಲೂಕುವಾರು ವಿವರ ಇಂತಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 41889 ಪುರುಷರು, 39942 ಮಹಿಳೆಯರು ಹಾಗೂ ಇತರೆ 1 ಮತದಾರರು ಸೇರಿದಂತೆ ಒಟ್ಟು 81832 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 103055 ಪುರುಷರು, 98303 ಮಹಿಳಾ ಮತದಾರರು ಸೇರಿದಂತೆ ಒಟ್ಟು 201358 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಹಿರಿಯೂರು ತಾಲ್ಲೂಕಿನಲ್ಲಿ 76770 ಪುರುಷರು, 73695 ಮಹಿಳಾ ಮತದಾರರು ಸೇರಿದಂತೆ ಒಟ್ಟು 150465 ಮತದಾರರು ಹಕ್ಕು ಚಲಾಯಿಸಿದ್ದಾರೆ.
ಮತದಾನ ಪ್ರಮಾಣ ಹೆಚ್ಚಳ:
*****ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೈಗೊಂಡ ಮತದಾರರ ಜಾಗೃತಿ ಕಾರ್ಯಕ್ರಮಗಳ ಪರಿಣಾಮವಾಗಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ.
ಕಳೆದ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 85.62 ಮತದಾನವಾಗಿತ್ತು. ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯು ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಮೊದಲ ಹಂತದ ಚುನಾವಣೆಯ ಮೂರು ತಾಲ್ಲೂಕಿನಲ್ಲಿ ಶೇ.86.65 ರಷ್ಟು ಮತದಾನವಾಗಿತ್ತು. ಎರಡನೇ ಹಂತದ ಚುನಾವಣೆಯ ಮೂರು ತಾಲ್ಲೂಕಿನಲ್ಲಿ ಶೇ.87.80 ರಷ್ಟು ಮತದಾನ ದಾಖಲಾಗಿದೆ.
ಇದೇ ಡಿಸೆಂಬರ್ 30ರಂದು ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆಯಲಿದ

About The Author

Leave a Reply

Your email address will not be published. Required fields are marked *