ಕೋವಿಡ್ ಕುರಿತು ಕೋಡಿಮಠ ಶ್ರೀ ನುಡಿದ ಭವಿಷ್ಯ ಏನು ಗೊತ್ತೆ?
1 min readಹಾಸನ: ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ವ್ಯಾಧಿಯಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲಾ ಎಂದು ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಇನ್ನು ಅನೇಕ ಸಂಗತಿಯನ್ನು ತಿಳಿಸಿರುವ ಅವರು ಕೊರೋನಾ ಸೋಂಕು ಜಗತ್ತಿನಲ್ಲಿ ಇನ್ನೂ ಉಲ್ಭಣವಾಗುವ ಲಕ್ಷಣವಿದೆ. ಭೂಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ. ಕೊರೋನಾ ವ್ಯಾಧಿ ಜಗತ್ತಿಗೆ ಮುತ್ತಿಗೆ ಹಾಕಿ ಕೊಲ್ಲುತ್ತಾ ಹೋದರೂ ಭಾರತಕ್ಕೆ ಯಾವುದೇ ಅಪಾಯವಿಲ್ಲ ಮುಂದಿನ ಮೇ ಅಂತ್ಯ ದ ವೆಳೆಗೆ ರೋಗದ ತೀವ್ರತೆ ಕಡಿಮೆಯಾಗಲಿದೆ ಎಂದಿದ್ದಾರೆ.null
ದೇಶದಲ್ಲಿ ಹೊಸ ಶಾಸನ ಬರುವ ನಿರೀಕ್ಷೆಯಿದೆ ಇದು ಜನವಿರೋಧಿ ಯಾಗಬಾರದು ಇದರಿಂದ ದೇಶದ ನಾಯಕನಿಗೆ ಕಂಟಕವಾಗಲಿದೆ .ಗಿಡ, ಮರ, ಪ್ರಾಣಿಗಳಿಗೂ ಈ ಕೊರೋನಾ ಸೋಂಕು ಘೋರವಾಗಿ ಅಪ್ಪಳಿಸಲಿದೆ. ಮಳೆಯು ಹೆಚ್ಚು ಬೀಳಲಿದೆ ಬಿದ್ದ ಭೂಮಿ ಗೆ ಹೆಚ್ಚು ಮಳೆಯಾಗಿ ಜಲಪ್ರಳಯವಾಗುವ ಲಕ್ಷಣ ಹೆಚ್ಚಿದೆ ಎಂದು ಶ್ರೀಗಳು ಹೇಳಿದ್ದಾರೆ.
ಪ್ರತಿಯೊಬ್ಬರು ಅವರವರ ಇಷ್ಟದೇವರ ಪ್ರಾರ್ಥನೆ ಸಲ್ಲಿಸಬೇಕು. ಅಕ್ಷಯ ನಾಮ ತೃತೀಯದವರೆಗೂ ಈ ಕೊರೋನಾ ಅಬ್ಬರಿಸುತ್ತದೆ. ಮೇ ಅಂತ್ಯದ ವೇಳೆಗೆ ಒಂದು ಅವಸ್ಥೆ ತಲುಪುತ್ತದೆ. ಹೀಗಾಗಿ ಜನರು ಭಯ ಬೀಳುವ ಅವಶ್ಯಕತೆ ಇಲ್ಲ. ಪ್ರಕೃತಿ ಕೊಟ್ಟಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ ಎಂದು ಹೇಳಿದ್ದಾರೆ.