ಕಾರುಗಳಿಗೆ ಡ್ರೈವರ್ ಪಕ್ಕದ ಸೀಟಿಗೆ ಏನು ಕಡ್ಡಾಯ ಗೊತ್ತೆ?
1 min readನವದೆಹಲಿ : ಏಪ್ರಿಲ್ 1, 2021ರಿಂದ ತಯಾರಾಗುವಂತ ಎಲ್ಲಾ ಮಾದರಿಯ ಕಾರುಗಳಿಗೆ ಮುಂದಿನ ಡ್ರೈವ್ ಹಾಗೂ ಡ್ರೈವರ್ ಪಕ್ಕದ ಸೀಟುಗಳಿಗೆ ಏರ್ ಬ್ಯಾಗ್ ಕಡ್ಡಾಯಗೊಳಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ, 2021ರ ಏಪ್ರಿಲ್ 1ರಿಂದ ತಯಾರಿಸುವಂತ ಎಲ್ಲಾ ಮಾದರಿಯ ಕಾರುಗಳಿಗೆ ಮುಂದಿನ ಡ್ರೈವರ್ ಹಾಗೂ ಪಕ್ಕದ ಸೀಟ್ ಗಳಿಗೆ ಏರ್ ಬ್ಯಾಗ್ ಕಡ್ಡಾಯಗೊಳಿಸಲಾಗಿದೆ.