ಬಿಎಸ್ 4 ವಾಹನಗಳ ನೊಂದಣಿಗೆ ಅವಕಾಶ
1 min readಚಿತ್ರದುರ್ಗ:ಭಾರತ ಸ್ಟೇಜ್-4 ಮಾಪನದ ವಿವಿಧ ವರ್ಗದ ವಾಹನಗಳನ್ನು 2020ರ ಡಿಸೆಂಬರ್31 ರವರೆಗೆ ಖರೀದಿಸಿ ನೋಂದಣಿ ಮಾಡಿಸಿಕೊಳ್ಳದೆ ಇರುವ ವಾಹನಗಳ ನೋಂದಣಿಗೆ ಸಾರಿಗೆ ಆಯುಕ್ತರು 2021ರ ಜನವರಿ 1ರಿಂದ 16ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಎಲ್ಲಾ ವರ್ಗದ ಬಿಎಸ್-4 ಮಾಪನದ ವಾಹನಗಳನ್ನು ನಿಗಧಿತ ಶುಲ್ಕ ಹಾಗೂ ತೆರಿಗೆಯನ್ನು ಪಾವತಿಸಿ, ವಾಹನವನ್ನು ಹಾಜರುಪಡಿಸಿ ಜನವರಿ 16ರ ಒಳಗಾಗಿ ನೊಂದಾಯಿಸಿಕೊಳ್ಳಬೇಕು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ