March 3, 2024

Chitradurga hoysala

Kannada news portal

ಸಂಗಾತಿಯನ್ನು ಎಂದು ಲಘುವಾಗಿ ಪರಿಗಣಿಸಬಾರದು.

1 min read

ಹೊಸ ಜೀವನದ ಆರಂಭದ ಸಂಬಂಧದ ಮೊದಮೊದಲು ಎಲ್ಲವೂ ಚೆನ್ನಾಗಿರುತ್ತದೆ. ಸಂಗಾತಿಯ ಬಗ್ಗೆ ಆರಂಭದಲ್ಲಿ ಇರುವಷ್ಟು ಕಾಳಜಿ, ಕುತೂಹಲ, ಪ್ರೀತಿ ಎಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ. ಸಂಗಾತಿ ಎನ್ನುವ ಗೌರವವು ಕಡಿಮೆಯಾಗುವುದು. ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾಳೆ, ಯಾವಾಗಲೂ ಒಂದೇ ರೀತಿ ಎನ್ನುವಂತಹ ಲಘುವಾದ ಭಾವನೆಯನ್ನು ತಂದುಕೊಳ್ಳಬಾರದು. ಅದು ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಹಾಗೂ ಬೇಸರವನ್ನು ಮೂಡಿಸುವುದು. ಸಂಗಾತಿಯ ನಡುವೆ ಯಾವಾಗ ಪ್ರೀತಿ ಗೌರವ ಹಾಗೂ ಕಾಳಜಿಯ ಭಾವನೆ ಕಡಿಮೆ ಆಗುತ್ತದೋ ಆಗ ಪರಸ್ಪರ ಬೇಸರ ಮತ್ತು ನಿರಾಸೆಯ ಭಾವನೆ ಮೂಡುವುದು. ದಂಪತಿಗಳು ಅಥವಾ ಸಂಗಾತಿಗಳು ಎಂದಿಗೂ ನಿಮ್ಮವರ ಬಗ್ಗೆ ನಿಷ್ಕಾಳಜಿ ತೋರದಿರಿ ಹಾಗೂ ಅವರನ್ನು ಲಘುವಾಗಿ ಪರಿಗಣಿಸದಿರಿ. ನಿಮ್ಮ ಬದುಕಿಗೆ ಅವರೇ ಪ್ರೀತಿಯ ದೀಪ ಹಾಗೂ ಬದುಕಿನ ಆಸ್ತಿ ಎನ್ನುವುದನ್ನು ನೆನಪಿನಲ್ಲಿ ಇಡಿ. ಆಗ ಎಲ್ಲವೂ ಸುಖಮಯವಾಗಿರುತ್ತದೆ.

About The Author

Leave a Reply

Your email address will not be published. Required fields are marked *