ರೋಟರಿ ಕ್ಲಬ್ ಸನ್ಮಾನಿಸಿದ್ದಕ್ಕೆ ತುಂಬಾ ಸಂತಸ ತಂದಿದೆ: ಮಹೇಶ್
1 min readಚಿತ್ರದುರ್ಗ: ರೋಟರಿ ಕ್ಲಬ್ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜದ ಒಳಿತಿಗಾಗಿ ಶಾಲೆಗಳ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸದಾ ಮುಂಚೂಣಿಯಲ್ಲಿ ಸಮಾಜದ ಅಭಿವೃದ್ಧಿಗಾಗಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಟರಿ ಕ್ಲಬ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಹೇಶ್ ಅವರು ಮಾತನಾಡಿದರು.
ರೋಟರಿ ಅಧ್ಯಕ್ಷರಾದ ನಾಗೇಂದ್ರ ಬಾಬು ರವರು ಮಾತನಾಡಿ ರೋಟರಿ ಸಂಸ್ಥೆಯು ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದೆ ಸಮಾಜದ ಅಭಿವೃದ್ಧಿಯೇ ನಮ್ಮ ಗುರಿ ಎಂದರು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಮಹೇಶ್ ಮುಖ್ಯ ಶಿಕ್ಷಕರು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಶ್ರೀ ನಸ್ರುಲ್ಲಾ ಎಕ್ಸ್-ರೇ ಟೆಕ್ನಿಷಿಯನ್ ಸರಕಾರಿ ಆಸ್ಪತ್ರೆ ಚಿತ್ರದುರ್ಗ ಹಾಗೂ ವಾಹನ ಚಾಲಕರಾದ ವಜೀರ್ ಭಾಷಾ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿಯವರಾದ ಕಲಕಯ್ಯ ರೇವಣಕೀಮಠ, ರೋಟರಿ ಕ್ಲಬ್ ನ ಪದಾಧಿಕಾರಿಗಳಾದ ವೀರೇಶ್, ಬ್ರಹ್ಮಾನಂದ ಗುಪ್ತ, ವೀರಭದ್ರಸ್ವಾಮಿ, ವೆಂಕಟೇಶ್, ಜಯಶ್ರೀ ತರುಣ್ ಎಂ ಶಾ, ಡಾಕ್ಟರ್ ತಿಪ್ಪೇಸ್ವಾಮಿ ರವಿಕುಮಾರ್, ಚಿನ್ನಪ್ಪರೆಡ್ಡಿ,ಲಕ್ಷ್ಮಣ್ ಮುಂತಾದವರು ಭಾಗವಹಿಸಿದ್ದರು