ಬಿಗ್ ಬಾಸ್ ಸ್ವರ್ಧಿಯಾಗಿದ್ದ ನಟಿ ಆತ್ಮಹತ್ಯೆಗೆ ಶರಣು.
1 min readಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ನಟಿ ಜಯಶ್ರೀ ರಾಮಯ್ಯ ಅವರು ನಗರದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಗಡಿ ರಸ್ತೆಯ ಪ್ರಗತಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಜಯಶ್ರೀ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ನಟಿ ಜಯಶ್ರೀ ರಾಮಯ್ಯ ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಕುರಿತಂತೆ ಪೋಸ್ಟ್ ಮಾಡಿ ಸುದ್ದಿಯಾಗಿದ್ದರು. “ಐ ಕ್ವಿಟ್” ಎಂದು ಪೋಸ್ಟ್ ಮಾಡುವ ಮೂಲಕ ಸಂಚಲನ ಮುಡಿಸಿದ್ದರು. ಬಳಿಕ, ಸ್ನೇಹಿತರು, ಚಿತ್ರರಂಗದ ಕೆಲ ಪ್ರಮುಖರು ಸಮಾಧಾನ ಹೇಳಿದ್ದರು. ನಟ ಸುದೀಪ್ ಸಹ ಸಾಂತ್ವನ ಹೇಳಿದ್ದರು.