ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಪ ನಿರ್ದೇಶಕಿ ಮಮತಾ ಅವರಿಂದ ಧ್ವಜಾರೋಹಣ.
1 min readಚಿತ್ರದುರ್ಗ:ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ 72 ನೇ ಗಣರಾಜ್ಯೋತ್ಸವದ. ಧ್ವಜಾರೋಹಣವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಮತಾ ನೆರವೇರಿಸಿದರು. ಎಪ್ಪತ್ತೆರಡನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿ ಭಾರತವು ಒಕ್ಕೂಟ ರಾಷ್ಟ್ರವಾದ ಜಾತ್ಯಾತೀತತೆ ವೈವಿಧ್ಯತೆಯಲ್ಲಿ ಏಕತೆಯ ನಾಡು ಇಂದು ಭಾರತದಲ್ಲಿ ಆಧುನಿಕ ಪ್ರಪಂಚದಲ್ಲಿ ಜಗತ್ತಿನಲ್ಲೇ ಸ್ಪರ್ಧಾತ್ಮಕ ಯುಗದಲ್ಲಿ ಸಾಗುವತ್ತ ಪ್ರಯತ್ನ ಮಾಡುವಲ್ಲಿ ವಿದ್ಯಾರ್ಥಿಗಳನ್ನು ಸಿದ್ಧತೆ ಮಾಡಬೇಕಾಗುತ್ತದೆ ಎಂದರು. ಇದಕ್ಕೆ ಇಲಾಖೆಯ ಎಲ್ಲಾರೂ ಯುವ ಸಮೂಹಕ್ಕೆ ಸರಿದಾರಿಯಲ್ಲಿ ನಡೆಸಲು ಶ್ರಮಿಸಬೇಕು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಪತ್ರಾಂಖಿತ ಕಚೇರಿ ವ್ಯವಸ್ಥಾಪಕ ಚನ್ನಬಸಪ್ಪ ಮತ್ತು ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.