ದೇಶದ ಭವಿಷ್ಯ ಪ್ರಜೆಗಳ ಕೈಯಲಿದೆ: ರಾಹುಲ್ ಗಾಂಧಿ
1 min readಭಾರತದ ಭವಿಷ್ಯ ಪ್ರಜೆಗಳ ಕೈಯಲ್ಲಿದೆ. ಅದು ‘ಸತ್ಯಾಗ್ರಹಿ’ ರೈತರೇ ಆಗಿರಲಿ ಅಥವಾ ಕಾರ್ಮಿಕರು, ದೊಡ್ಡ, ಮಧ್ಯಮ ಮತ್ತು ಸಣ್ಣ ಉದ್ಯಮಿಗಳು , ಉದ್ಯೋಗಾಕಾಂಕ್ಷಿಗಳು ಮತ್ತು ಹಣದುಬ್ಬರ ಎದುರಿಸುತ್ತಿರುವ ಗೃಹಿಣಿಯರೇ ಆಗಿರಬಹುದು ಎಂದು ರಾಹುಲ್ ಗಾಂಧಿ ಅವರು ಹೇಳಿದರು.
72ನೇ ಗಣರಾಜ್ಯೋತ್ಸವದ ಶುಭಕೋರಿದ ಅವರು, ‘ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಹೋರಾಡಿದವರನ್ನು ಮರೆಯಬಾರದು. ಗಣರಾಜೋತ್ಸವದ ದಿನವಾದ ಇಂದು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ನವೀಕರಿಸುವುದಾಗಿ ಪ್ರತಿಜ್ಞೆ ಮಾಡೋಣ. ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರೂ ಶುಭಕೋರಿ ಟ್ವೀಟ್ ಮಾಡಿದ್ದಾರೆ.