ಭದ್ರತಾ ಸಿಬ್ಬಂದಿ ನೇಮಕಾತಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
1 min readಚಿತ್ರದುರ್ಗ,ಜನವರಿ29:
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಖಾಲಿ ಇರುವ ಭದ್ರತಾ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಅರ್ಹ ಮಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡ, ಖಾಲಿ ಹುದ್ದೆಗಳ ಮೀಸಲಾತಿ, ಆಯ್ಕೆಯ ಯೋಜನೆ, ಆನ್ ಲೈನ್ ಅಪ್ಲಿಕೇಶನ್‍ಗಳನ್ನು ಸಲ್ಲಿಸುವಂತಹ ಎಲ್ಲಾ ವಿವರಗಳನ್ನು ಜನವರಿ 22ರಂದು ವೆಬ್‍ಸೈಟ್ ತಿತಿತಿ.ಡಿbi.oಡಿg.iಟಿ ನಲ್ಲಿ ಮತ್ತು ಜನವರಿ 30ರ ನಂತರ ಜಾರಿಯಾಗುವ ಎಂಪ್ಲಾಯ್ ಮೆಂಟ್ ನ್ಯೂಸ್, ರೋಜಗಾರ್ ಸಮಾಚಾರ್‍ನಲ್ಲಿ ಜಾಹಿರಾತು ಪರಿಶೀಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ವೆಬ್ ಸೈಟ್ ಮೂಲಕ ಆನ್‍ಲೈನ್ ಮೋಡ್‍ನಿಂದ ಅರ್ಜಿ ಸಲ್ಲಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ