ಇಕ್ಸ್ಪೆಯರ್ ಡೆಟ್ ಆದ 6125 ಲೀಟರ್ ಬಿಯರ್ ಚೆಲ್ಲಿದ ಅಬಕಾರಿ ಇಲಾಖೆ.
1 min readಚಿತ್ರದುರ್ಗ,ಫೆಬ್ರವರಿ05:
ಚಿತ್ರದುರ್ಗ ನಗರದ ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ನಿಗಮದ ಮಳಿಗೆಯಲ್ಲಿನ ಅವಧಿ ಮೀರಿದ ಬಿಯರ್ ದಾಸ್ತಾನನ್ನು ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ಆದೇಶ ಮೇರೆಗೆ ಗುರುವಾರ ನಾಶಪಡಿಸಲಾಯಿತು.
ಇಲ್ಲಿನ ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಗಮ) ಡಿಪೋ ಹೊರಭಾಗದ ಆವರಣದಲ್ಲಿ ಅಬಕಾರಿ ಅಧಿಕಾರಿಗಳು ಅವಧಿ ಮೀರಿದ ಒಟ್ಟು 861 ಬಿಯರ್ ಪೆಟ್ಟಿಗೆಗಳಲ್ಲಿನ 6125.38 ಲೀಟರ್ ಬಿಯರ್ ದಾಸ್ತಾನನ್ನು ಗಾಜಿನ ಬಾಟಲಿಗಳ ಮುಚ್ಚಳ ತೆರೆದು ಪರಿಸರಕ್ಕೆ ಹಾನಿಯಾಗದಂತೆ ಚೆಲ್ಲುವ ಮೂಲಕ ನಾಶಪಡಿಸಲಾಯಿತು.
ಚಿತ್ರದುರ್ಗ ನಗರದ ಕೆಎಸ್‍ಬಿಸಿಎಲ್ ಡಿಪೋದಲ್ಲಿ ಮಾರಾಟವಾಗದೆ ಅವಧಿ ಮೀರಿರುವ ಮಾನವ ಸೇವನೆಗೆ ಯೋಗ್ಯವಲ್ಲದ ಒಟ್ಟು 6125.38 ಲೀಟರ್ ಬಿಯರ್ ಅವಧಿ ಮೀರಿದ್ದರಿಂದ ನಿಯಾಮಾನುಸಾರ ಇಲಾಖೆಯಿಂದ ನಾಶಪಡಿಸಲಾಗಿದೆ.
ಚಿತ್ರದುರ್ಗ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಎಸ್.ಎಂ. ಶಿವಹರಳಯ್ಯ, ಕೆಎಸ್‍ಬಿಸಿಎಲ್ ಡಿಫೋದ ಅಬಕಾರಿ ನಿರೀಕ್ಷಕರಾದ ಪಿ. ವಸಂತ, ಕೆಎಸ್‍ಬಿಸಿಎಲ್ ಡಿಫೋ ವ್ಯವಸ್ಥಾಪಕರಾದ ಕೆ. ಸೋಮಶೇಖರ್ ಸೇರಿದಂತೆ ಅಬಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.