ನಮ್ಮ ಸರ್ಕಾರ ಎಲ್ಲಾ ಜನಾಂಗದ ಅಭಿವೃದ್ಧಿಗೆ ಬದ್ದ: ಸಚಿವ ಶ್ರೀರಾಮುಲು
1 min readದಾವಣಗೆರೆ: ಸರ್ವರ ಜನಾಂಗದ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರ್ಕಾರ ಬದ್ದವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸುರಗೊಂಡನಕೊಪ್ಪದಲ್ಲಿ ಇಂದು ನಡೆದ ಶ್ರೀ ಸಂತ ಸೇವಾಲಾಲ್ ಅವರ 282ನೇ ಜಯಂತಿಯಲ್ಲಿ ಮಾತನಾಡಿ ಶ್ರೀ ಸಂತ ಸೇವಾಲಾಲ್ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಎಲ್ಲರೂ ಪಾಲಿಸೋಣ. ಲಂಬಾಣಿ ಸಮುದಾಯದ ಸಂಸ್ಕೃತಿ ಮತ್ತು ಭಾಷೆ ತುಂಬಾ ವಿಶಿಷ್ಟವಾಗಿದೆ. ಬಂಜಾರ ಸಮುದಾಯ ಕೊಡುವುದನ್ನು ರೂಢಿಸಿಕೊಂಡಿದೆಯೇ ವಿನಾ ಬೇಡುವುದನ್ನಲ್ಲ. ಈ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಹಲವು ಯೋಜನೆ ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರು ಭಾಗವಹಿಸಿದ್ದರು.. ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಬಸವರಾಜ್, ಶ್ರೀ ಪ್ರಭು ಚೌಹಾಣ್, ಶ್ರೀ ಆರ್.ಶಂಕರ್, ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ, ಶಾಸಕರಾದ ಶ್ರೀ ಎಂ.ಪಿ.ರೇಣುಕಾಚಾರ್ಯ, ಶ್ರೀ ಪಿ.ರಾಜೀವ್ ಉಪಸ್ಥಿತರಿದ್ದರು.