ಕೃಷಿ ಜೊತೆಗೆ ಹೈನುಗಾರಿಕೆಗೆ ರೂಡಿಸಿಕೊಳ್ಳಿ: ಶಾಸಕ ಟಿ.ರಘುಮೂರ್ತಿ
1 min readಚಳ್ಳಕೆರೆ-18 ಕೃಷಿಯ ಜತೆಗೆ ಹೈನುಗಾರಿಕೆಯನ್ನು ರೂಢಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಶ್ರೀ ಸಾಯಿಬಾಬಾ ಮಂದಿರ ಸಭಾಂಗಣದಲ್ಲಿ ನಡೆದ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲೂಕುಗಳ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈಚೆಗೆ ಹೈನುಗಾರಿಕೆ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಸರ್ಕಾರವೂ ಸಹ ಹೈನುಗಾರಿಕೆ ಪ್ರೋತ್ಸಾಹ ನೀಡುತ್ತಿದ್ದು ರೈತರು ಕೃಷಿಯ ಜೊತೆಯಲ್ಲಿ ಹಸು ಸಾಕಾಣಿಕೆಗೂ ಹೆಚ್ಚಿನ ಪ್ರಮುಖ್ಯತೆ ನೀಡಬೇಕು. ಹೈನುಗಾರಿಕೆ ಹೆಚ್ಚು ಆರ್ಥಿಕ ಬಲಗೊಳಿಸುವ ಒಂದು ಉದ್ಯಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನ ಅಧ್ಯಕ್ಷ ಬಿ.ಸಿ ಸಂಜೀವಮೂರ್ತಿ, ಕೆಎಂಎಫ್ ನಿರ್ದೇಶಕ ಶ್ರೀ ವೀರಭದ್ರಬಾಬು, ಯಶ್ವಂತರಾಜ್, ಎಸ್. ಆರ್. ಗಿರೀಶ್, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಮಂಜುನಾಥ, ಜಿಲ್ಲಾ ಸಹಕಾರ ಯೂನಿಯನ ಉಪಾಧ್ಯಕ್ಷರು ರಾಮಣ್ಣ, ನಿರ್ದೇಶಕರು ಮುಂತಾದವರು ಹಾಜರಿದ್ದರು.