March 3, 2024

Chitradurga hoysala

Kannada news portal

ಭದ್ರ ಯೋಜನೆಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ:ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಬಿಟ್ಟು ಹೋಗಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 10 ಕೆರೆಗಳನ್ನು ಸೇರ್ಪಡೆ ಮಾಡಿ ಹೆಚ್ಚವರಿ 0.1 ಟಿಎಂಸಿ ನೀರು ಒದಗಿಸಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆಗೆ ಸಿಎಂ ಯಡಿಯೂರಪ್ಪ ಆದೇಶಿಸಲು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಾಕಷ್ಟು ಶ್ರಮಿಸಿದ್ದಾರೆ.

ಬರದ ನಾಡು ಚಿತ್ರದುರ್ಗ ಜಿಲ್ಲೆಗೆ ಜನರು ಸದಾ ನೀರಿನ ಚಿಂತೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಜಿಲ್ಲೆಯ ಸಂಜೀವಿನಿ ಯೋಜನೆಯಾಗಿರುವ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅತಿ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ, ಹಿಂದುಳಿದ ಜನಾಂಗದವರು ಪ್ರದೇಶದಲ್ಲಿನ ಹತ್ತು ಕೆರೆಗಳು ಭದ್ರ ಮೇಲ್ದಂಡೆ ಯೋಜನೆಯಿಂದ ಬಿಟ್ಟು ಹೋಗಿದ್ದ ಕಾರಣ ಚಿತ್ರದುರ್ಗ ಶಾಸಕರಾದ ತಿಪ್ಪಾರೆಡ್ಡಿ ಅವರು ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯದ ಹಿತದೃಷ್ಟಿಯಿಂದ ಕೆರೆಯ ವಿಚಾರವನ್ನು 30-1-2020 ರಲ್ಲಿ ಮುಖ್ಯಮಂತ್ರಿ ಅವರು ಮುರಘಾಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಗಮನಕ್ಕೆ ಶಾಸಕರು ತಂದಿದ್ದು ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಇದನ್ನು ವಿಧಾನಸಭೆಯ ಬಜೆಟ್ ಸಂದರ್ಭದಲ್ಲಿ ಮುಖ್ಯಮಂತ್ರಿ ಗಮನಕ್ಕೆ ಪತ್ರದ ಮೂಲಕ ತರುವ ಮೂಲಕ ಚಿತ್ರದುರ್ಗ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಭದ್ರ ಮೇಲ್ದಂಡೆ ಯೋಜನಯಲ್ಲಿ ಬಿಟ್ಟು ಹೋಗಿರುವ ಹತ್ತು ಕೆರೆಗಳಾದ ಮುರುಘಾ ಮಠದ ಹಿಂದಿನ ಮತ್ತು ಮುಂದಿನ ಕೆರೆಗಳು, ಸಿದ್ದಾಪುರ , ಮಾನಂಗಿ,ಕಾಟೀಹಳ್ಳಿ , ಹುಲ್ಲೂರು,ಅನ್ನೇಹಾಳು, ಕುರುಮರಡಿಕೆರೆ, ನಂದೀಪುರ, ಚಿಕ್ಕಸಿದ್ದಸಿದ್ದವ್ವನಹಳ್ಳಿ ಕೆರೆಗಳಿಗೆ ಒಟ್ಟು 10 ಗ್ರಾಮದ ಕೆರೆ 0.1 ಟಿಎಂಸಿ ಹೆಚ್ಚವರಿ ನೀರು ಒದಗಿಸುವಂತೆ ಮತ್ತು ನೀರು ಒದಗಿಸಲು ಬೇಕಾದ ಅಂದಾಜು ವೆಚ್ಚದ ಪಟ್ಟಿಯನ್ನು ಸಹ ಸಲ್ಲಿಸಿರುವ ಮನವಿಯಲ್ಲಿ ಸಲ್ಲಿಸಿ ಒಂದು ಹಂತದ ಕೆಲಸವನ್ನು ಮುಗಿಸುವಲ್ಲಿ ಶಾಸಕ ತಿಪ್ಪಾರೆಡ್ಡಿ ಅವರು ಯಶಸ್ವಿಯಾಗಿದ್ದಾರೆ.

ಬಾಕ್ಸ್. ಚಿತ್ರದುರ್ಗ ತಾಲೂಕಿನಲ್ಲಿ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ಬರುತ್ತವೆ.ಆದರೆ ನನ್ನ ಕ್ಷೇತ್ರದ ಹತ್ತು ಕೆರೆಗಳು ಬಿಟ್ಟು ಹೋಗಿರುವುದನ್ನು ಸೇರ್ಪಡೆ ಮಾಡಿ 0.1 ಟಿಎಂಸಿ ನೀರು ನೀಡಲು ಸಿಎಂ ಗೆ ಮನವಿ ಮಾಡಿದ್ದೇನೆ. ಇದರಿಂದ ನೂರಾರು ಹಳ್ಳಿಗಳ ರೈತರಿಗೆ ಅನುಕೂಲವಾಗಿ ಬೋರ್ ವೆಲ್ ಮಟ್ಟ ಹೆಚ್ಚಿ ರೈತರ ಬದುಕು ಅಸನಾಗುತ್ತದೆ. ಜಿ.ಹೆಚ್.ತಿಪ್ಪಾರೆಡ್ಡಿ ಶಾಸಕರು ಚಿತ್ರದುರ್ಗ

About The Author

Leave a Reply

Your email address will not be published. Required fields are marked *