ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ, ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ:ಕವಿತಾ ಎಸ್.ಮನ್ನಿಕೇರಿ
1 min readಚಿತ್ರದುರ್ಗ,ಫೆಬ್ರುವರಿ20:
ಆಡಳಿತ ಯಂತ್ರ ಯಾವಾಗಲು ಜನರ ಸನಿಹದಲ್ಲಿಯೇ ಇರಬೇಕು. ಇದಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗ್ರಾಮದ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ದಿನ ಸಂತೋಷದ ದಿನವಾಗಿದೆ. ಗ್ರಾಮಸ್ಥರು ಯಾವುದೇ ಭಯ, ಆತಂಕವಿಲ್ಲದೇ ಗ್ರಾಮಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಅಹವಾಲು, ಕುಂದುಕೊರತೆಗಳ ದೂರುಗಳನ್ನು ಮೌಖಿಕ ಹಾಗೂ ಲಿಖಿತ ರೂಪದಲ್ಲಿ ನೀಡಬಹುದಾಗಿದೆ ಎಂದರು.
ನಿಮ್ಮ ಕಷ್ಟ, ಕಾರ್ಪಣ್ಯ ತೊಂದರೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಯತ್ನ ಮಾಡುತ್ತಾರೆ. ಇಂತಹ ಅವಕಾಶ ನಿಮ್ಮ ಮನೆ ಮುಂದೆಯೇ ಸಿಕ್ಕಿದೆ. ಹಾಗಾಗಿ ಎಲ್ಲಾ ಅಧಿಕಾರಿಗಳು ಇಲ್ಲಿ ಉಪಸ್ಥಿತರಿರುವುದರಿಂದ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ಅವಹಾಲುಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಗುತ್ತದೆ. ಮತ್ತು ಇತರೆ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಇದು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಗ್ರಾಮಸ್ಥರು ಇದರ ಉಪಯೋಗ ಮಾಡಿಕೊಳ್ಳಬೇಕು. ಈ ಗ್ರಾಮ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸದೇ ದುಡಿಮೆಯಲ್ಲಿ ತೊಡಗಿಸುವುದು ಕಾನೂನು ಬಾಹಿರವಾಗಿದೆ. ಮಕ್ಕಳನ್ನು ದುಡಿಮೆಗೆ ಕಳುಹಿಸುವವರ ಮತ್ತು ದುಡಿಸಿಕೊಳ್ಳುವ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಅವರ ಬದುಕನ್ನು ಸುಂದರಗೊಳಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು.
18 ವರ್ಷಕ್ಕಿಂತ ಕಡಿಮೆ ಇರುವ ಹೆಣ್ಣು ಮಕ್ಕಳನ್ನು ವಿವಾಹ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಬಾಲ್ಯ ವಿವಾಹದಲ್ಲಿ ಪಾಲ್ಗೊಳ್ಳುವರೆಲ್ಲ ಕಾನೂನು ಅಡಿಯಲ್ಲಿ ಅಪರಾಧಿಗಳು ಇವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.
112 ನಂಬರ್ ಗೆ ಕರೆ ಮಾಡಿದ್ರೆ ಪೊಲೀಸ್ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ನಿಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಲಿದ್ದಾರೆ. ಪೊಲೀಸ್ ಇಲಾಖೆ ನಿಮ್ಮ ಸೇವೆಗೆ ಸದಾ ಸಿದ್ದವಾಗಿದೆ ಎಂದರು.
ಗ್ರಾಮ ವಾಸ್ತವ್ಯದಲ್ಲಿ ಒಟ್ಟು 14 ಅರ್ಜಿ ಗಳು ಸ್ವೀಕೃತಗೊಂಡಿವೆ. ಅದರಲ್ಲಿ 02 ಕಂದಾಯ ಇಲಾಖೆ,12 ಇತರೆ ಇಲಾಖೆಯ ಅರ್ಜಿಗಳು ಸ್ವೀಕೃತಗೊಂಡಿವೆ. 09 ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಪಿಂಚಾಣಿಗೆ ಬಂದ ಅರ್ಜಿಗಳಾಗಿವೆ.
ಕಣಕುಪ್ಪೆ ಗ್ರಾಮದಲ್ಲಿ 3 ಗುಡಿಸಲಿನ ಮನೆಗಳು ಪತ್ತೆಯಾಗಿದ್ದು, ಮೂರು ಗುಡಿಸಲುಗಳನ್ನು ಮನೆಯಾಗಿ ನಿರ್ಮಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದೆ. 14 ಅಂಶದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ.
ಕಣಕುಪ್ಪೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಕಣಕುಪ್ಪೆ ಗ್ರಾಮದಲ್ಲಿ ಪ್ರೌಢ ಶಾಲೆ ನಿರ್ಮಾಣಕ್ಕೆ, ಕರಡಿಹಳ್ಳಿ ಗ್ರಾಮದಿಂದ ಕಣಕುಪ್ಟೆ ಮಾರ್ಗವಾಗಿ ಆಂಧ್ರದ ಜಾಜರಕಲ್ಲು ವರೆಗೆ ಜನ, ಜಾನುವಾರು, ವಾಹನ ಸಂಚಾರಕ್ಕೆ ಸರಿಯಾದ ರಸ್ತೆ ನಿರ್ಮಾಣ ಮಾಡಿ, ಡಾಂಬರೀಕರಣಕ್ಕೆ ಮನವಿ ಮಾಡಿದರು.ಕಣಕುಪ್ಪೆ ಗ್ರಾಮದಿಂದ ಆಂಧ್ರದ ಹೊಸಗುಡ್ಡ, ಪುಲಕುರ್ತಿ, ಶಿರೋಕೊಳ ವರೆಗೆ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ಮಾಡುವುದು, ಕಣಕುಪ್ಪೆ ಗಡಿಯಿಂದ ಮುರಡಿ ಗ್ರಾಮ, ಸಮುದಾಯಭವನ ನಿರ್ಮಾಣ, ಮಹಿಳೆ ಮತ್ತು ಪುರುಷರಿಗೆ ಶೌಚಾಲಯ ನಿರ್ಮಾಣಕ್ಕೆ ಅಹವಾಲು ಸಲ್ಲಿಸಿದರು.
ಗ್ರಾಮದ ಕೆರೆಯ ಹೂಳು ತೆಗೆದು ಹೊಸದಾಗಿ ಚಪ್ಪಡಿಕಲ್ಲು ಅಳವಡಿಸಿ ಜನ, ಜಾನುವಾರುಗಳಿಗೆ ನೀರಿನ ವ್ಯವಸ್ಥೆಗೆ ಮನವಿ ಸಲ್ಲಿಸಿದರು. ಗ್ರಾಮದ ಬುಡಕಟ್ಟು ಸಂಸ್ಕೃತಿ ಉಳಿಸಲು ರಂಗಮಂದಿರ ನಿರ್ಮಿಸಿಕೊಡುವುದು, ಸಾರಿಗೆ ವ್ಯವಸ್ಥೆ, ಸ್ವಚ್ಛ ಗ್ರಾಮ ಯೋಜನೆಯಡಿ ಚರಂಡಿ ವ್ಯವಸ್ಥೆ, ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ದೇವಸ್ಥಾನವಾದ ಓಬಳಾ ನರಸಿಂಹಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಸಿಕೊಡುವಂತೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಕಣಕುಪ್ಪೆ ಗ್ರಾಮಕ್ಕೆ ಜಾನುವಾರುಗಳಿಗೆ ಖಾಯಂ ಗೋಶಾಲೆ ತೆರೆಯುವುದು, ಖಾಯಂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆ ನಿರ್ಮಾಣ, ಬಡವರಿಗೆ ಹೊಸದಾಗಿ 55 ಆಶ್ರಯ ಮನೆಗಳ ನಿರ್ಮಾಣ, ಮೂರು ಕೋಟಿ ವೆಚ್ಚದಲ್ಲಿ ಮೂರು ದೊಡ್ಡ ಚೆಕ್ಡ್ಯಾಂ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.
ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವುದರಿಂದ ಕೆರೆಯ ಪಕ್ಕ 10 ಲಕ್ಷ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ನಿರ್ಮಿಸಿ,ತುಂಗಭದ್ರ ಹಿನ್ನೀರು ಕುಡಿಯುವ ನೀರಿನ ಯೋಜನೆಗೆ ಅಳವಡಿಸುವುದು. ಗ್ರಾಮದ ಬಡವರಿಗೆ 35 ಹೊಸ ರೇಷನ್ ಕಾರ್ಡ್ ನೀಡಿ, ಗ್ರಾಮದಲ್ಲಿಯೇ ನ್ಯಾಯಾ ಬೆಲೆ ಅಂಗಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ನಿರ್ಮಾಣಕ್ಕೆ ಅವಕಾಶವಿಲ್ಲ. ಪಡಿತರವನ್ನು ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ತಂದು ಪೂರೈಕೆ ಮಾಡುತ್ತಿದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು.
ಗ್ರಾಮದಲ್ಲಿ 5 ಹೈ ಮಾಸ್ಕ್ ಲೈಟ್ ಅಳವಡಿಸುವುದು, ರಾಷ್ಟ್ರೀಯ ಹೆದ್ದಾರಿ ಹತ್ತಿರ ರೂ. 10.00 ಲಕ್ಷ ವೆಚ್ಚದಲ್ಲಿ ದ್ವಾರಬಾಗಿಲು ನಿರ್ಮಾಣ, ರೂ.50.00 ಲಕ್ಷದ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಿಸುವುದು, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ರೂ.15.00 ಲಕ್ಷ ವೆಚ್ಚದಲ್ಲಿ ಲೈಬ್ರರಿ ಮತ್ತು ಇ-ಲೈಬ್ರರಿ ನಿರ್ಮಿಸಿಕೊಡುವುದು.
ಚಿತ್ರದುರ್ಗ,ಫೆಬ್ರುವರಿ20:

ರೂ.25.00 ಲಕ್ಷ ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಿಸುವುದು ಹಾಗೂ ಗ್ರಾಮದಲ್ಲಿ ರೂ.1.00 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು .
ಸ್ಥಳದಲ್ಲಿ ಕಣಕುಪ್ಪೆ ಗ್ರಾಮದ ನಿವಾಸಿಗಳಾದ ಗುಡಿಸಲು ಮನೆಯಲ್ಲಿ ವಾಸವಾಗಿರುವ ಭಾಗ್ಯಮ್ಮ ಮತ್ತು ನಾಗೇಂದ್ರ ದಂಪತಿಗಳಿಗೆ ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣ ಮಂಜೂರು ಮಾಡಿಕೊಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಹೇಳಿದರು.
ಗ್ರಾಮಕ್ಕೆ ಶ್ರೀಘ್ರದಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಶೀಘ್ರದಲ್ಲಿಯೇ ಸಾರಿಗೆ ಸಂಪರ್ಕ ಕಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಗ್ರಾಮಸ್ಥರಿಗೆ ತಿಳಿಸಿದರು.ಗ್ರಾಮದಲ್ಲಿ 2021-2022ನೇ ಸಾಲಿನಲ್ಲಿ ಸ್ಮಾಶನ ನಿರ್ಮಾಣಕ್ಕೆ ಏಪ್ರಿಲ್ 1ರಂದು ಆರಂಭ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಜನನಿ ಶಿಶು ಸುರಕ್ಷಾ ಯೋಜನೆಯಡಿ ಗ್ರಾಮದ ಗರ್ಭಿಣಿಯರಿಗೆ ಜಿಲ್ಲಾಧಿಕಾರಿ ಕವಿತಾ ಎಸ್, ಮನ್ನಿಕೇರಿ ಮತ್ತು ಎಸ್ಪಿ. ಜಿ.ರಾಧಿಕಾ ಅವರು ಸೀಮಂತ ಮಾಡಿದರು. ಮತ್ತು ಗ್ರಾಮದ ಇಬ್ಬರು ವಿಕಲಚೇತನ ಮಕ್ಕಳಿಗೆ ವಿಲ್ ಚೆರ್ ಅನ್ನು ವಿತರಿಸಲಾಯಿತು. ಹಾಗೂ ಕೊರೋನಾ ವಾರಿಯರ್ರ್ ಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ತಹಶೀಲ್ದಾರ್ ಆನಂದ ಮೂರ್ತಿ, ಇಒ ಪ್ರಕಾಶ್ ನಾಯ್ಕ್, ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಕರಾದ ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಕ ರಾಜಾನಾಯ್ಕ್, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.