ಅಂಬೇಡ್ಕರ್ ಗೆ ಅವಮಾನ ಮಾಡಿರುವ ಸಿದ್ದರಾಮಯ್ಯ ಆಗ್ರಹಿಸಿ ರಾಷ್ಟ್ರೀಯ ದಲಿತ ಸಂಘದಿಂದ ಪ್ರತಿಭಟನೆ.
1 min readಚಿತ್ರದುರ್ಗ ಫೆ. ೨೨
ಸಂವಿಧಾನ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ನಿರಾಕರಿಸಿ ಶ್ರೀರಾಮ ಮಂದಿರ ಸ್ಥಳದ ತೀರ್ಪಿನ ವಿರುದ್ದ ಉದ್ದಟತನದ ಹೇಳೀಕೆಯನ್ನು ನೀಡಿ ಅಂಬೇಡ್ಕರ್ ಗೆ ಅವಮಾನ ಮಾಡಿರುವ ಸಿದ್ದರಾಮಯ್ಯ ಹಿಂದು ಮತ್ತು ದಲಿತರನ್ನು ಕ್ಷೇಮೆಯಾಚಿಸುವಂತೆ ಆಗ್ರಹಿಸಿ ರಾಷ್ಟ್ರೀಯ ದಲಿತ ಸಂಘದವತಿಯಿಂದ ಇಂದು ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಸಂಘದ ಪದಾಧಿಕಾರಿಗಳು ದಾರಿಯುದ್ದಕ್ಕೂ ಸಿದ್ದರಾಮಯ್ಯರವರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಸಿದ್ದರಾಮಯ್ಯರವರು ಕಾನೂನಿನಲ್ಲಿ ಪಡೆದಿರುವ ಪದವಿಗೆ ಆವಮಾನ ಮಾಡಿದ್ದಾರೆ. ಇದರಿಂದ ಅಂಬೇಡ್ಕರ್ ರವರ ಅನುಯಾಯಿಗಳಿಗೆ ನೋವಾಗಿದೆ. ೨೪ ಗಂಟೆಯೂಳಗೆ ಸಿದ್ದರಾಮಯ್ಯ ರವರು ಆಡಿದ ಮಾತಿಗೆ ಕ್ಷಮೆಯನ್ನು ಯಾಚಿಸಬೇಕು, ಇಲ್ಲವಾದರೆ ಹೋರಾಟವನ್ನು ತೀವ್ರಗೂಳಿಸುವುದಾಗಿ ಜಿಲ್ಲಾಧ್ಯಕ್ಷ ಪಾಲನೇತ್ರ ನಾಯಕ, ಯುವ ಘಟಕದ ಅಧ್ಯಕ್ಷ ಪ್ರದೀಪ್, ಕಾರ್ಯಧ್ಯಕ್ಷ ನಟರಾಜ್ ಸೇರಿದಂತರ ಇತರರು ಭಾಗವಹಿಸಿದ್ದರು.