March 29, 2024

Chitradurga hoysala

Kannada news portal

ಚಿಂತಕರ ಚಾವಡಿ ಇಂದು ಸೋತವರ ಪುನರ್ವಸತಿ ಕೇಂದ್ರವಾಗಿದೆ: ಬಸವರಾಜ್ ಹೊರಟ್ಟಿ.

1 min read

ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ಫೆ. ೨೫ : ಸಂಗೀತ, ಸಾಹಿತ್ಯ, ಪತ್ರಕರ್ತ ಕ್ಷೇತ್ರದವರಿಗೆ ಇರುವ ವಿಧಾನ ಪರಿಷತ್ ಸದನ ಇದು.ಇಂದು ಚಿಂತಕರ ಛಾವಡಿ ಹೋಗಿ, ಒಪಿ , ಒಐಂ, ಚುನಾವಣೆಯಲ್ಲಿ ಸೋತವರ ಪುನರ್ವಸತಿ ಕೇಂದ್ರವಾಗುತ್ತಿದ್ದು, ಈ ಸದನ ಇಂದು ಕಲುಷಿತವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಂತಕವನ್ನು ವ್ಯಕ್ತಪಡಿದ್ದಾರೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದರು.

ಕರ್ನಾಟಕ ವಿಧಾನಪರಿಷತ್ ಈಡೀ ದೇಶದಲ್ಲಿಯೇ ಶ್ರೇಷ್ಠ ವಿಧಾನ ಪರಿಷತ್ ಎಂಬ ಹೆಸರು ಪಡೆದಿದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್‌ನಲ್ಲಿ ನಡೆಯುವ ಗಲಾಟೆಗಳು ವಿಧಾನ ಪರಿಷತ್ತನ್ನು ರದ್ದು ಪಡಿಸುವಂತೆ ಕೆಲವು ಮಾಧ್ಯಮಗಳಲ್ಲೂ ಬಿತ್ತರವಾಗಿತ್ತು ಆಗ ನನಗೆ ತುಂಬಾ ನೋವಾಗಿತ್ತು. ಆಗ ನಾನು ಇನ್ನು ಸಭಾಪತಿಯಾಗಿರಲಿಲ್ಲ ಇದರ ಬಗ್ಗೆ ಜನತೆ ಮುಂದೆ ಕ್ಷೆಮೆ ಯಾಚಿಸಿದ್ದೆ.ರಾಜ್ಯದ ಎರಡೂ ಸದನಗಳಿಂದ ನಾನೇ ಹಿರಿಯ ಸದಸ್ಯ. ನಾನು ಮೂಲತಃ ಸಾಮಾನ್ಯ ಶಿಕ್ಷಕ ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾಯಿತು ಎಂದರು.

೧೯೮೦ ರಲ್ಲಿ ರಾಜ್ಯದ ಶಿಕ್ಷಕರು ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರು. ನಾನು ಈಗಲೂ ಶಿಕ್ಷಕರನ್ನು ದೇವರೆಂದು ಭಾವಿಸುತ್ತೇನೆ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಯಾರೂ ಸಹ ಹುಟ್ಟಿದ ಊರು, ಹೆತ್ತ ತಂದೆ ತಾಯಿ, ಕಲಿಸಿದ ಗುರುಗಳನ್ನು ಯಾವತ್ತೂ ಮರೆಯಬಾರದು. ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ನಾನು ಶಿಕ್ಷಣ ಮಂತ್ರಿ ಮತ್ತು ಸಭಾಪತಿಯೂ ಸಹ ಆಗಿದ್ದೇನೆ. ಜಗತ್ತಿನಲ್ಲಿ ಯಾರು ಸಹ ಶಾಶ್ವತರಲ್ಲ ಬಂದಂತಹ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಸಮಾಜ ಸೇವೆಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ತು ಎಂದರೆ ಚಿಂತಕರ ಚಾವಡಿ ಎಂಬ ಮಾತು ಇತ್ತು ಆದರೆ ಈಗ ಬದಲಾಗಿದೆ ಚುನಾವಣೆಯಲ್ಲಿ ಸೋತವರು, ಪಕ್ಷ ಬಿಟ್ಟು ಬಂದವರು ವಿಧಾನಪರಿಷತ್ ಸದಸ್ಯರಾಗುತ್ತಾರೆ. ಚುನಾವಣೆಯಲ್ಲಿ ಸೋತವರನ್ನು ಪಕ್ಷಬಿಟ್ಟು ಬಂದವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವುದು ಬೇಡ ಎಂಬುದು ನನ್ನ ಅನಿಸಿಕೆ.ಮಾತಿಗೂ ಕೃತಿಗೂ ಬಹಳ ಅಂತರವಿರಬಾರದು ಆದರೆ ಅದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪಕ್ಷಾತೀತವಾಗಿ ಕೆಲಸ ಮಾಡುವ ಸಲುವಾಗಿ. ನಾನು ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆಯಾದ ನಂತರ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೊರಟ್ಟಿ ತಿಳಿಸಿದರು.

ಚುನಾವಣೆ ಸೋತವರು, ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟವರು, ಇವರೆಲ್ಲಾ ಬಂದಿದ್ದಾರೆ ಅದನ್ನ ಸರಿ ಮಾಡಬೇಕಿದೆ.ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿ ಬಂದಿದ್ದೇನೆ. ದಯಮಾಡಿ ಈ ಸದನಕ್ಕೆ ಸೋತವರನ್ನ, ನಿಮ್ಮ ಹಿಂಬಾಲಕರನ್ನ ತರಬೇಡಿ ಎಂದು ಹೇಳಿದ್ದೇನೆ. ಆ ಸದನ ದೇವಸ್ಥಾನದಷ್ಟು ಪವಿತ್ರ ಸ್ಥಾನ, ಅದನ್ನ ಅಪವಿತ್ರ ಮಾಡಬೇಡಿ.ಇದಕ್ಕೆ ಎಲ್ಲರೂ ಕೂಡಾ ತಲೆ ಆಡಿಸಿದ್ದಾರೆ, ಮುಂದೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಅಭಿನಂದನಾ ಕಾರ್ಯಕ್ರಮದಲ್ಲಿ ಸದನದ ಕುರಿತು ಕಳವಳ ವ್ಯಕ್ತಪಡಿಸಿದರು.

ಅಭಿನಂದನ ನುಡಿಗಳನ್ನಾಡಿದ ಪ್ರಾಧ್ಯಾಪಕ ಡಾ. ಜೆ. ಕರಿಯಪ್ಪ ಮಾಳಿಗೆ. ವಿಧಾನಪರಿಷತ್ತು ಬಹುತ್ವದಿಂದ ಕೂಡಿದ್ದು, ಬುದ್ಧಿಜೀವಿಗಳ ಘನತೆಯನ್ನು ಹೊಂದಿದೆ. ರಾಜಕಾರಣದಿಂದ ಇಚ್ಛಾಶಕ್ತಿ ಮತ್ತು ಘನತೆಯನ್ನು ಪಡೆದುಕೊಂಡವರು ಹೊರಟ್ಟಿಯವರು. ರಾಜಕಾರಣದಲ್ಲಿ ಅನೇಕರು ಆಸ್ತಿ ಕಳೆದುಕೊಂಡಿದ್ದಾರೆ. ಹಣ ಮಾಡಿಕೊಂಡವರಿದ್ದಾರೆ. ಆದರೆ ಹೊರಟ್ಟಿಯವರ ವ್ಯಕ್ತಿತ್ವ ಇದಕ್ಕೆ ಭಿನ್ನವಾದುದು. ನಾಡು ಕಂಡ ಅಪರೂಪದ ಶಿಕ್ಷಣತಜ್ಞರು. ಶಿಕ್ಷಕ ಸಮುದಾಯದಲ್ಲಿ ಬದಲಾವಣೆ ಆಗಿದೆ ಎಂದರೆ ಅದಕ್ಕೆ ಕಾರಣ ಹೊರಟ್ಟಿಯವರು. ಸ್ನೇಹಜೀವಿ, ಸಜ್ಜನರು. ಹೊರಟ್ಟಿಯವರಿಗೆ ಬುದ್ಧನ ಕಾರುಣ್ಯವಿದೆ ಎಂದರು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಸಜ್ಜನರು ಸಿಗುತ್ತಾರೆ ಆದರೆ ಪ್ರಜ್ಞಾವಂತರು ಸಿಗುವುದಿಲ್ಲ. ಪ್ರಬುದ್ಧರಿದ್ದಲ್ಲಿ ಯಾವುದೇ ಅನಾಹುತ ಆಗುವುದಿಲ್ಲ. ಪ್ರಬುದ್ಧರು ಆಯ್ಕೆಯಾದರೆ ಅಪ್ರಬುದ್ಧರ ಸಂಖ್ಯೆ ಕಡಿಮೆಯಾಗುತ್ತದೆ ಹೊರಟ್ಟಿಯವರು ಪ್ರಜ್ಞಾವಂತ ಪ್ರಬುದ್ಧ ರಾಜಕಾರಣಿ. ಅವರದು ಹೋರಾಟದ ಬದುಕು. ಸಮಾಜದ ಹಿತಕ್ಕಾಗಿ, ಶಿಕ್ಷಕರ ಕ್ಷೇಮಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ಹೊರಟ್ಟಿಯವರದು ಸಾರ್ಥಕವಾಗಿರುವ ಜೀವನ. ವಿಧಾನಪರಿಷತ್ತು ಬುದ್ಧಿವಂತರ, ವಿದ್ಯಾವಂತರ ಪರಿಷತ್ತು. ಅವರದು ಸಹಕಾರ ತತ್ವ. ವ್ಯಕ್ತಿಗೆ ಬದ್ಧತೆ ಇರಬೇಕು. ಕೇವಲ ಆಶ್ವಾಸನೆಗಳಿಂದ ಸಮಸ್ಯೆಗಳು ನಿವಾರಣೆ ಆಗುವುದಿಲ್ಲ. ರಾಷ್ಟ್ರಕ್ಕೆ, ರಾಜ್ಯಕ್ಕೆ ಬದ್ಧತೆಯ ರಾಜಕಾರಣಿಗಳು ಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನುಮಲಿ ಷಣ್ಮುಖಪ್ಪ, ಕೆಇಬಿ ಷಣ್ಮುಖಪ್ಪ, ಮಲ್ಲಿಕಾರ್ಜುನಸ್ವಾಮಿ ವೇದಿಕೆಯಲ್ಲಿದ್ದರು. ಪ್ರತಾಪ್ ಜೋಗಿ ಸ್ವಾಗತಿಸಿದರು. ಉಮೇಶ ಪತ್ತಾರ ಪ್ರಾರ್ಥಿಸಿದರು. ನಿರಂಜನ ದೇವರಮನೆ ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply

Your email address will not be published. Required fields are marked *