May 19, 2024

Chitradurga hoysala

Kannada news portal

ರೈತರ ಬದುಕನ್ನು ಪ್ರಧಾನಿ ನಾಶ ಮಾಡುತ್ತಿದ್ದಾರೆ: ರೈತ ಮುಖಂಡ ಸಿದ್ದವೀರಪ್ಪ ಆರೋಪ

1 min read

ಚಿತ್ರದುರ್ಗ: ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೂಳಿಸುವುದಾಗಿ ಹೇಳುತ್ತಾ ವಿವಿಧ ರೀತಿಯ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಾ ಅವರ ಬದುಕನ್ನು ನಾಶ ಮಾಡುತ್ತಿದ್ದರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಹಾ ಅಚ್ಚೆ ದಿನ್ ಆಯೇಗಾ ಎಂದು ಹೇಳುತ್ತಲೇ ಬಂದಿದೆ ಆದರೆ ಅಚ್ಚೆ ದಿನ ಯಾರಿಗೆ ಎಂಬುದನ್ನು ಮಾತ್ರ ಹೇಳಲಿಲ್ಲ ಅಚ್ಚಾ ದಿನ್ ಬಡವರಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಬಂದಿಲ್ಲ ಬಂದಿರುವುದೆಲ್ಲಾ ಶ್ರೀಮಂತರಿಗೆ ಎಂದು ಆರೋಪಿಸಿ ಕಾರು, ಬೈಕ್‌ಗಳನ್ನು ಬಳಸುವವರ ಮೇಲಷ್ಟೇ ಅಲ್ಲ, ಹಲವು ಕ್ಷೇತ್ರಗಳು, ಚಟುವಟಿಕೆಗಳ ಮೇಲೂ ತೈಲ ಬೆಲೆ ಏರಿಕೆ ಬಹುದೊಡ್ಡ ಪರಿಣಾಮ ಬೀರಿದೆ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ದೇಶದಲ್ಲಿ ಹಲವು ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಕಾರು ಹಾಗೂ ಬೈಕ್‌ಗಳನ್ನು ಬಳಸುವ ಪ್ರಯಾಣಿಕರೊಂದಿಗೆ, ಉತ್ಪಾದನೆ, ಸರಕು ಸಾಗಣೆ ಹಾಗೂ ಇನ್ನಿತರ ಕ್ಷೇತ್ರಗಳು ಕೂಡ ಬೆಲೆ ಏರಿಕೆಯಿಂದ ತತ್ತರಿಸುತ್ತಿವೆ ಎಂದು ದೂರಿದರು.

ರೈತ ಕಷ್ಟ ಬಂದಾಗ ಬ್ಯಾಂಕ್‌ನಲ್ಲಿ ಬಂಗಾರವನ್ನು ಅಡವಿಟ್ಟು ಸಾಲವನ್ನು ಪಡೆಯುತ್ತಾರೆ ಉತ್ತಮ ಬೆಳೆ ಬಂದಾಗ ಬಿಡಿಸಿಕೊಳ್ಳುತ್ತಾನೆ, ಆದರೆ ಈಗ ಇಂದಿನ ದಿನಮಾನದಲ್ಲಿ ಸರ್ಕಾರಗಳ ಆವೈಜ್ಞಾನಿಕ ಕೃಷಿ ನೀತಿಯಿಂದಾಗಿ ರೈತ ಬದುಕುವುದೇ ಕಷ್ಟವಾಗಿದೆ ಇಂತಹ ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿರುವ ಗ್ರಾಮೀಣ ಬ್ಯಾಂಕ್ ರೈತರ ಬಂಗಾರವನ್ನು ಹರಾಜು ಹಾಕುತ್ತಿದೆ. ಹರಾಜಿನ ಬಗ್ಗೆ ಯಾವುದೆ ಮಾಹಿತಿಯನ್ನು ನೀಡದೇ ಬ್ಯಾಂಕ್ ಮತ್ತು  ಖರೀದಿದಾರ ಒಳಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಗೆ ಹರಾಜು ಹಾಕುತ್ತಿದ್ದಾರೆ ರೈತ ಕಷ್ಟದಲ್ಲಿದ್ದಾನೆ ಸಾಲದಲ್ಲಿ ರಿಯಾಯಿತಿ ತೋರಿಸುವಂತೆ ಮನವಿ ಮಾಡಿದರು ಸಹಾ ಯಾವುದೇ ಬೆಲೆ ಇಲ್ಲದಂತೆ ಆಗಿದೆ ಎಂದು ಗ್ರಾಮೀಣ ಬ್ಯಾಂಕ್‌ನ ಕಾರ್ಯ ವೈಖರಿಯನ್ನು ಸಿದ್ದವೀರಪ್ಪ ಟೀಕಿಸಿದರು.

ಗ್ರಾಮೀಣ ಬ್ಯಾಂಕ್ ಕೆನರಾ ಬ್ಯಾಂಕ್ ಆಡಳಿತಕ್ಕೆ ಒಳಪಟ್ಟಿದೆ ಇದೇ ಕೆನರಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದ ರೈತನಿಗೆ ಬ್ಯಾಂಕ್ ಅಧಿಕಾರಿಗಳು ಮಾನವಿಯತೇಯನ್ನು ತೋರುವುದರ ಮೂಲಕ ಸಾಲದಲ್ಲಿ ಶೇ.೩೦ರಷ್ಟುನ್ನು ಕಟ್ಟಿಸಿಕೊಂಡು ಬಡ್ಡಿ ಇಲ್ಲದೆ ಸಾಲದಿಂದ ಋಣ ಮುಕ್ತರಾನ್ನಾಗಿ ಮಾಡುತ್ತಿದ್ದಾರೆ ಆದರೆ ಗ್ರಾಮೀಣ ಬ್ಯಾಂಕ್ ಇದನ್ನು ಮಾಡುತ್ತಿಲ್ಲ ಇದರ ಬಗ್ಗೆ ಕೇಳೀದರೆ ಯಾರು ಸಹಾ ಸರಿಯಾದ ರೀತಿಯಲ್ಲಿ ಜವಾಬ್ದಾರಿಯಿಂದ ಮಾತನಾಡುತ್ತಿಲ್ಲ ಇದರಿಂದ ಬೇಸತ್ತಿದ್ದು ಅತಿ ಶೀಘ್ರದಲ್ಲಿಯೇ ಗ್ರಾಮೀಣ ಬ್ಯಾಂಕ್‌ನ್ನು ಮುತ್ತಿಗೆ ಹಾಕುವ ಕಾರ್ಯಕ್ರಮ ಇದೆ ಎಂದು ಎಚ್ಚರಿಸಿ ಇದರ ಬಗ್ಗೆ ೭ ದಿನದ ಗಡುವನ್ನು ನೀಡಲಾಗಿದ್ದು ಅಷ್ಟರೊಳಗಾಗಿ ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ ನೀಡಬೇಕಿದೆ ಇಲ್ಲವಾದಲ್ಲಿ ನಮ್ಮ ಪಾಲಿನ ಕೆಲಸವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಲಿಂಗಯ್ಯ, ಮಲ್ಲಿಕಾರ್ಜನ್, ನಾಗರಾಜ್, ರಾಮರೆಡ್ಡಿ, ಕುಮಾರ್ ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *