March 3, 2024

Chitradurga hoysala

Kannada news portal

ಕೊಳಚೆ ಪ್ರದೇಶದ ಕುಟುಂಬಗಳಿಗೆ ವರ್ಷದ ಕೊನೆಯಲ್ಲಿ ಹಕ್ಕು ಪತ್ರ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಚಿತ್ರದುರ್ಗ,ಮಾ.೨: ನಗರದಲ್ಲಿ ಘೋಷಿತವಾಗಿರುವ ಕೊಳಚೆ ಪ್ರದೇಶಗಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಈ ವರ್ಷದ ಕೊನೆಯಲ್ಲಿ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು‌ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ೩೮ ಕೊಳಚೆ ಪ್ರದೇಶಗಳು ಇದ್ದು, ಇಲ್ಲಿ ವಾಸ ಮಾಡುವ ೪೮೪೯ ಕುಟುಂಬಗಳಲ್ಲಿ ೨೫೫೦೦ ಕ್ಕಿಂತ ಹೆಚ್ಚು ಜನ ವಾಸ ಮಾಡುತ್ತಿದ್ದು, ಸುಮಾರು ೯೫.೨೬ ಎಕರೆ ಪ್ರದೇಶವನ್ನು ಹೊಂದಿದೆ. ರಾಜ್ಯ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ, ಕೊಳವೆ ಪ್ರದೇಶದಲ್ಲಿ ವಾಸ ಮಾಡುವಂತಹ ಜನರಿಗೆ ಹಕ್ಕು ಪತ್ರಗಳು ಸಿಗುವಂತಾಗಿದೆ ಎಂದರು.
ನಗರದಲ್ಲಿನ ಕೊಳಚೆ ಪ್ರದೇಶಹಳಲ್ಲಿ ಕೆಲವು ಖಾಸಗಿ ಮಾಲಿಕತ್ವದಲ್ಲಿರುವ ಜಾಗಗಳಲ್ಲಿ ಕೊಳಚೆ ಪ್ರದೇಶ ನಿರ್ಮಾಣವಾಗಿದೆ. ಇದರಲ್ಲಿ ವಾಸ ಮಾಡುವ ಜನರಿಗೆ ಸರ್ಕಾರ ರಕ್ಷಣೆ ನೀಡಲಿದೆ. ಪರಿಹಾರವನ್ನು ಜಾಗದ ಮಾಲೀಕರು ಕೊಳಚೆ ಮಂಡಳಿಯಿಂದ ಪಡೆಯಬಹುದು ಎಂದು ಹೇಳಿದರು.
ನಗರಾಶ್ರಯದಲ್ಲಿ ೭೨೫೨ ಆರ್ಹ ಫಲಾನುಭವಿಗಳನ್ನು ಗುರುತಿಸಿದ್ದು, ಮೊದಲ ಹಂತದಲ್ಲಿ ಮೇಗಳ ಹಳ್ಳಿಯಲ್ಲಿ ೧೦೦೧, ಜಿ+೨ ಮಾದರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಫಲಾನುಭವಿಗಳಿಗೆ ನಿಯಮಾನುಸಾರ ಸಹಾಯಧನ ದೊರೆಯಲಿದೆ ಹಾಗೂ ಸರ್ಕಾರಕ್ಕೆ ವಂತಿಕೆಯನ್ನು ಕಟ್ಟಬೇಕಿದೆ ಎಂದರು.
ಪ್ರಧಾನಮಂತ್ರಿ ಆವಾಜ್ ಯೋಜನೆಯಲ್ಲಿ ೧೫೭೫ ಮನೆಗಳ ನಿರ್ಮಾಣಕ್ಕೆ ಅನುಮೋಧನೆ ದೊರೆತಿದ್ದು, ಇದರಲ್ಲಿ ೫೦೫ ಮ‌ನೆಗಳು ಪೂರ್ಣಗೊಂಡಿದ್ದು, ೨೫೩ ಮನೆಗಳು ವಿವಿಧ ನಿರ್ಮಾಣದ ಹಂತದಲ್ಲಿವೆ ಎಂದರು.
ಕೊಳಚೆ ಪ್ರದೇಶದಲ್ಲಿ ವಾಸವಿರುವ ಮನೆಗಳಿಗೆ ಸಂಭಂದಪಟ್ಟಂತೆ ಸರ್ವೆ ಕಾರ್ಯವನ್ನು ಅತೀ ಶೀಘ್ರದಲ್ಲೆ ಪ್ರಾರಂಭಿಸಲಿದ್ದು,ವರ್ಷತ್ಯದಲ್ಲಿ ಹಕ್ಕು ಪತ್ರ ನೀಡಲಾಗುವುದು ನಂತರ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಪೌರಾಯುಕ್ತ ಹನುಮಂತರಾಜು ಸೇರಿದಂತೆ ಇತತರು ಹಾಜರಿದ್ದರು.

About The Author

Leave a Reply

Your email address will not be published. Required fields are marked *